ಭಯೋತ್ಪಾದಕರ ಸಹಚರನ ಬಂಧನ : ಶಸ್ತ್ರಾಸ್ತ್ರ, ಮದ್ದುಗುಂಡು ವಶ
ಬಂಡಿಪೋರಾ, 21 ಜೂನ್ (ಹಿ.ಸ.) : ಆ್ಯಂಕರ್ : ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಕೆಟ್ಸುನ್ ಬಿನ್ಲಿಪೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರ ಸಹಚರನೊಬ್ಬನನ್ನು ಬಂಧಿಸಿವೆ. 27 ಅಸ್ಸಾಂ ರೈಫಲ್ಸ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ತಪಾಸಣಾ ಕಾರ್ಯಾಚರಣೆಯ ವೇಳೆ, ಹಲ್ಮತ್ಪೋರಾ ಗ್ರಾ
ಭಯೋತ್ಪಾದಕರ ಸಹಚರನ ಬಂಧನ : ಶಸ್ತ್ರಾಸ್ತ್ರ, ಮದ್ದುಗುಂಡು ವಶ


ಬಂಡಿಪೋರಾ, 21 ಜೂನ್ (ಹಿ.ಸ.) :

ಆ್ಯಂಕರ್ : ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಕೆಟ್ಸುನ್ ಬಿನ್ಲಿಪೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರ ಸಹಚರನೊಬ್ಬನನ್ನು ಬಂಧಿಸಿವೆ. 27 ಅಸ್ಸಾಂ ರೈಫಲ್ಸ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ತಪಾಸಣಾ ಕಾರ್ಯಾಚರಣೆಯ ವೇಳೆ, ಹಲ್ಮತ್ಪೋರಾ ಗ್ರಾಮದ 48 ವರ್ಷದ ಬಶೀರ್ ಅಹ್ಮದ್ ನನ್ನು ಬಂಧಿಸಲಾಗಿದೆ.

ಬಂಧಿತನಿಂದ ಒಂದು ಚೀನೀ ಗ್ರೆನೇಡ್ ಮತ್ತು ಎಕೆ-47 ರೈಫಲ್‌ಗೆ ಸೇರಿರುವ 11 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಶೀರ್ ಅಹ್ಮದ್ ಭಯೋತ್ಪಾದಕರಿಗೆ ಸಹಾಯ ನೀಡುತ್ತಿದ್ದನು ಎಂದು ಶಂಕಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande