ಜೂ.20 ಮತ್ತು 21 ರಂದು ಅಂಚೆ ಕಚೇರಿ ವ್ಯವಹಾರ ಸ್ಥಗಿತ
ಕೊಪ್ಪಳ, 18 ಜೂನ್ (ಹಿ.ಸ.) : ಆ್ಯಂಕರ್ : ಭಾರತೀಯ ಅಂಚೆ ಇಲಾಖೆಯ ಆದೇಶದಂತೆ ಜೂನ್ 23 ರಂದು ಕೊಪ್ಪಳ ಪ್ರಧಾನ ಅಂಚೆ ಕಚೇರಿಯ ಮತ್ತು ಅದರ ವ್ಯಾಪ್ತಿಯ ಎಲ್ಲಾ ಉಪ ಹಾಗೂ ಶಾಖಾ ಅಂಚೆ ಕಚೇರಿಗಳಲ್ಲಿ ಹೊಸ ತಂತ್ರಾಂಶ (APT 2.0) ಅಳವಡಿಕೆ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಪೂರ್ವ ಸಿದ್ದತೆಗಾಗಿ ಜೂ.2
ಜೂ.20 ಮತ್ತು 21 ರಂದು ಅಂಚೆ ಕಚೇರಿ ವ್ಯವಹಾರ ಸ್ಥಗಿತ


ಕೊಪ್ಪಳ, 18 ಜೂನ್ (ಹಿ.ಸ.) :

ಆ್ಯಂಕರ್ : ಭಾರತೀಯ ಅಂಚೆ ಇಲಾಖೆಯ ಆದೇಶದಂತೆ ಜೂನ್ 23 ರಂದು ಕೊಪ್ಪಳ ಪ್ರಧಾನ ಅಂಚೆ ಕಚೇರಿಯ ಮತ್ತು ಅದರ ವ್ಯಾಪ್ತಿಯ ಎಲ್ಲಾ ಉಪ ಹಾಗೂ ಶಾಖಾ ಅಂಚೆ ಕಚೇರಿಗಳಲ್ಲಿ ಹೊಸ ತಂತ್ರಾಂಶ (APT 2.0) ಅಳವಡಿಕೆ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಪೂರ್ವ ಸಿದ್ದತೆಗಾಗಿ ಜೂ.20 ಮತ್ತು 21 ರಂದು ಕೊಪ್ಪಳ ಪ್ರಧಾನ ಅಂಚೆ ಕಚೇರಿ ಮತ್ತು ಅದರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಉಪ ಹಾಗೂ ಶಾಖಾ ಅಂಚೆ ಕಚೇರಿಗಳಲ್ಲಿ ಎಲ್ಲಾ ರೀತಿಯ ವ್ಯವಹಾರ, ವಹಿವಾಟುಗಳು ಸ್ಥಗಿತಗೊಳ್ಳಲಿವೆ.

ಹೊಸ ತಂತ್ರಾಂಶ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಪೂರ್ವ ಸಿದ್ದತೆಗಾಗಿ ಮೇಲೆ ತಿಳಿಸಿದ ದಿನಾಂಕಗಳಂದು ಕೊಪ್ಪಳ ಜಿಲ್ಲೆಯ ಅಡಿಯಲ್ಲಿ ಬರುವ ಎಲ್ಲಾ ಅಂಚೆ ಕಚೇರಿಗಳಲ್ಲಿ ಕಾರ್ಯನಿರ್ವಹಣೆ ಸ್ಥಗಿತಗೊಳ್ಳಲಿದ್ದು, ಮೇಲೆ ತಿಳಿಸಿದ ಎರಡು ದಿನಗಳಲ್ಲಿ ಯಾವುದೇ ವಹಿವಾಟುಗಳು ಇರುವುದಿಲ್ಲ. ಜೂನ್ 23 ರಿಂದ ಕೊಪ್ಪಳ ಜಿಲ್ಲೆಯ ಎಲ್ಲಾ ಅಂಚೆ ಕಚೇರಿಗಳಲ್ಲಿ ಸೇವೆ ಲಭ್ಯವಿರುತ್ತದೆ. ಗ್ರಾಹಕರು ಸಹಕರಿಸಬೇಕೆಂದು ಕೊಪ್ಪಳ ಅಂಚೆ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande