ಡಿ.17ರಿಂದ ಅಂತಾರಾಷ್ಟ್ರೀಯ ಸಾಂಪ್ರದಾಯಿಕ ಔಷಧ ಸಮ್ಮೇಳನ
ನವದೆಹಲಿ, 08 ಡಿಸೆಂಬರ್ (ಹಿ.ಸ.) : ಆ್ಯಂಕರ್ : ವಿಶ್ವ ಆರೋಗ್ಯ ಸಂಸ್ಥೆಯ ಎರಡನೇ ಸಾಂಪ್ರದಾಯಿಕ ಅಂತಾರಾಷ್ಟ್ರೀಯ ಔಷಧದ ಜಾಗತಿಕ ಸಮ್ಮೇಳನ ಡಿಸೆಂಬರ್ 17ರಿಂದ 19ರ ವರೆಗೆ ದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿದೆ. ಸಮ್ಮೇಳನದಲ್ಲಿ 100 ದೇಶಗಳು ಹಾಗೂ 20 ದೇಶಗಳ ಆರೋಗ್ಯ ಸಚಿವರು ಭಾಗವಹಿಸಲಿದ್ದಾರೆ. ಸಮ್
Conference


ನವದೆಹಲಿ, 08 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ವಿಶ್ವ ಆರೋಗ್ಯ ಸಂಸ್ಥೆಯ ಎರಡನೇ ಸಾಂಪ್ರದಾಯಿಕ ಅಂತಾರಾಷ್ಟ್ರೀಯ ಔಷಧದ ಜಾಗತಿಕ ಸಮ್ಮೇಳನ ಡಿಸೆಂಬರ್ 17ರಿಂದ 19ರ ವರೆಗೆ ದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿದೆ. ಸಮ್ಮೇಳನದಲ್ಲಿ 100 ದೇಶಗಳು ಹಾಗೂ 20 ದೇಶಗಳ ಆರೋಗ್ಯ ಸಚಿವರು ಭಾಗವಹಿಸಲಿದ್ದಾರೆ.

ಸಮ್ಮೇಳನದ ಮುಖ್ಯಾಂಶವಾಗಿ ಅಶ್ವಗಂಧದ ಕುರಿತು ವಿಶೇಷ ಅಧಿವೇಶನ ಆಯೋಜಿಸಲಾಗಿದ್ದು, ಅದರ ವೈಜ್ಞಾನಿಕ ಪುರಾವೆಗಳು, ಸಾಂಪ್ರದಾಯಿಕ ಬಳಕೆ ಮತ್ತು ಜಾಗತಿಕ ಆರೋಗ್ಯದಲ್ಲಿನ ಪಾತ್ರ ಚರ್ಚೆಯಾಗಲಿದೆ.

WHO ರಚಿಸಿರುವ ಸಾಂಪ್ರದಾಯಿಕ ಔಷಧದ ಜಾಗತಿಕ ಡಿಜಿಟಲ್ ಗ್ರಂಥಾಲಯ ಈ ಸಮ್ಮೇಳನದ ಆಕರ್ಷಣೆಯಾಗಿದ್ದು, 1.6 ಮಿಲಿಯನ್ ಪ್ರಕಟಣೆಗಳಿರುವ ಈ ಗ್ರಂಥಾಲಯದಲ್ಲಿ 70,000ಕ್ಕೂ ಹೆಚ್ಚು ಭಾರತೀಯ ಸಂಶೋಧನೆಗಳು ಒಳಗೊಂಡಿದೆ.

ಸಮ್ಮೇಳನದ ವಿಷಯ ಸಮತೋಲನವನ್ನು ಪುನಃಸ್ಥಾಪಿಸುವುದು ಆರೋಗ್ಯ ಮತ್ತು ಸ್ವಾಸ್ಥ್ಯಕ್ಕೆ ಸಂಬಂಧಿಸಿದ ವಿಜ್ಞಾನ ಮತ್ತು ಅಭ್ಯಾಸಗಳು ಎಂದು ಆಯುಷ್ ರಾಜ್ಯ ಸಚಿವ ಪ್ರತಾಪ್‌ರಾವ್ ಜಾಧವ್ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande