ರಾಯಚೂರು ತಾಪಂ ಕಚೇರಿಗೆ ಜಿಪಂ ಸಿಇಓ ದಿಢೀರ್ ಭೇಟಿ
ರಾಯಚೂರು, 04 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ್ ಕಾಂದೂ ಅವರು ರಾಯಚೂರು ತಾಲೂಕ ಪಂಚಾಯತಿ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿನ ಆಡಳಿತ ಶಾಖೆ, ನರೇಗಾ ಶಾಖೆಗೆ ತೆರಳಿ ವೀಕ್ಷಣೆ ನಡೆಸಿ ಸಿಬ್ಬಂದಿಯಿ0ದ ಮಾಹಿತಿ ಪಡೆ
ರಾಯಚೂರು ತಾಪಂ ಕಚೇರಿಗೆ ಜಿಪಂ ಸಿಇಓ ದಿಢೀರ್ ಭೇಟಿ


ರಾಯಚೂರು ತಾಪಂ ಕಚೇರಿಗೆ ಜಿಪಂ ಸಿಇಓ ದಿಢೀರ್ ಭೇಟಿ


ರಾಯಚೂರು, 04 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ್ ಕಾಂದೂ ಅವರು ರಾಯಚೂರು ತಾಲೂಕ ಪಂಚಾಯತಿ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಅಲ್ಲಿನ ಆಡಳಿತ ಶಾಖೆ, ನರೇಗಾ ಶಾಖೆಗೆ ತೆರಳಿ ವೀಕ್ಷಣೆ ನಡೆಸಿ ಸಿಬ್ಬಂದಿಯಿ0ದ ಮಾಹಿತಿ ಪಡೆದುಕೊಂಡರು. ನಂತರ ಕಾರ್ಯನಿರ್ವಾಹಕ ಅಧಿಕಾರಿಯವರ ಚೇಂಬರ್‌ಗೆ ತೆರಳಿ ತಾಲೂಕ ಪಂಚಾಯತಿ ಕಾರ್ಯಾಲಯದ ಕಾರ್ಯವೈಖರಿಯ ಬಗ್ಗೆ ಪರಿಶೀಲಿಸಿದರು.

ನಂತರ ಸಾಮಾರ್ಥ್ಯ ಸೌಧಕ್ಕೆ ಭೇಟಿ ನೀಡಿ, ಎನ್‌ಆರ್‌ಎಲ್‌ಎಂ ಸಿಬ್ಬಂದಿಯವರೊ0ದಿಗೆ ಮಾತನಾಡಿ ಮಾಹಿತಿ ಪಡೆದರು.

ನಂತರ ಅಕ್ಷರ ದಾಸೋಹ ಶಾಖೆಗೆ ಭೇಟಿ ನೀಡಿ ಪರಿಶೀಲಿಸಿದರು. ಸಾಮರ್ಥ್ಯ ಸೌಧದಲ್ಲಿ ಸ್ವಚ್ಚತೆಯನ್ನು ಕಾಪಾಡಲು ಸಂಬoಧಿಸಿದ ಸಿಬ್ಬಂದಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ್, ನರೇಗಾ ಸಹಾಯಕ ನಿರ್ದೇಶಕರಾದ ಹನುಮಂತ, ಪಂಚಾಯತ್ ರಾಜ್‌ನ ಸಹಾಯಕ ನಿರ್ದೇಶಕರಾದ ಶಿವಪ್ಪ ಹಾಗೂ ಕಚೇರಿಯ ಸಿಬ್ಬಂದಿ ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande