ಜನವರಿ 3ರ ಶನಿವಾರ ಮಹರ್ಷಿ ಶ್ರೀವಾಲ್ಮೀಕಿ ಪುತ್ಥಳಿ ಅನಾರವಣ
ಬಳ್ಳಾರಿ, 04 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ನಗರದಲ್ಲಿ ಅನಾವರಣ ಆಗಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಅವರ ಪುತ್ಥಳಿಯ ನಿರ್ಮಾಣ ಕಾಮಗಾರಿಯನ್ನು ಮಹರ್ಷಿ ಶ್ರೀ ವಾಲ್ಮೀಕಿ ಅವರು ನನ್ನ ಮೂಲಕ ನೆರವೇರಿಸುತ್ತಿದ್ದು, ಜನವರಿ 3, 2026ರ ಶನಿವಾರ ಲೋಕಾರ್ಪಣೆ ಮಾಡಲಾಗುತ್ತದೆ ಎಂದು ಬಳ
ಜನವರಿ 3ರ ಶನಿವಾರ ಮಹರ್ಷಿ ಶ್ರೀವಾಲ್ಮೀಕಿ ಪುತ್ಥಳಿ ಅನಾರವಣ


ಜನವರಿ 3ರ ಶನಿವಾರ ಮಹರ್ಷಿ ಶ್ರೀವಾಲ್ಮೀಕಿ ಪುತ್ಥಳಿ ಅನಾರವಣ


ಜನವರಿ 3ರ ಶನಿವಾರ ಮಹರ್ಷಿ ಶ್ರೀವಾಲ್ಮೀಕಿ ಪುತ್ಥಳಿ ಅನಾರವಣ


ಬಳ್ಳಾರಿ, 04 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ನಗರದಲ್ಲಿ ಅನಾವರಣ ಆಗಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಅವರ ಪುತ್ಥಳಿಯ ನಿರ್ಮಾಣ ಕಾಮಗಾರಿಯನ್ನು ಮಹರ್ಷಿ ಶ್ರೀ ವಾಲ್ಮೀಕಿ ಅವರು ನನ್ನ ಮೂಲಕ ನೆರವೇರಿಸುತ್ತಿದ್ದು, ಜನವರಿ 3, 2026ರ ಶನಿವಾರ ಲೋಕಾರ್ಪಣೆ ಮಾಡಲಾಗುತ್ತದೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತರೆಡ್ಡಿ ಅವರು ತಿಳಿಸಿದ್ದಾರೆ.

ಬಳ್ಳಾರಿ ನಗರ ಮತ್ತು ಜಿಲ್ಲೆಯ ವಾಲ್ಮೀಕಿ ಸಮಾಜದ ಮುಖಂಡರು ಏರ್ಪಡಿಸಿದ್ದ ಮಹರ್ಷಿ ಶ್ರೀ ವಾಲ್ಮೀಕಿ ಅವರ ಪುತ್ಥಳಿ ಅನಾವರಣದ ಎರಡನೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಯೋಧ್ಯೆಯ ರಾಮಲಲ್ಲಾನ ಮೂರ್ತಿ ಕೆತ್ತಿರುವ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕುಸರಿ ಕಲೆಯಲ್ಲಿಯೇ ಮಹರ್ಷಿ ಶ್ರೀ ವಾಲ್ಮೀಕಿ ಅವರ ಪುತ್ಥಳಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ಪುತ್ಥಳಿ ಅನಾವರಣಕ್ಕೆ ವಾಲ್ಮೀಕಿ ನಾಯಕರ ಸಮಾಜದವರ ಸಮಿತಿಗಳನ್ನು ರಚಿಸಿ, ಯಶಸ್ವಿಗೆ ಶ್ರಮಿಸಬೇಕು ಎಂದರು.

ವಾಲ್ಮೀಕಿ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷರಾದ ಬಿ. ರಾಂ ಪ್ರಸಾದ್ ಅವರು, ಪುತ್ಥಳಿ ಅನಾವರಣದಲ್ಲಿ ವಾಲ್ಮೀಕಿ ನಾಯಕರ ಸಮಾಜದವರ ಭಾಗೀದಾರಿಕೆ ಬಹಳ ಮುಖ್ಯ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಮಿತಿಗಳನ್ನು ರಚಿಸಿ, ಎಲ್ಲರನ್ನೂ ಪಾಲ್ಗೊಳ್ಳುವಂತೆ ಮಾಡಲಾಗುತ್ತದೆ. ಮಾಜಿ ಸಚಿವ ಬಿ. ನಾಗೇಂದ್ರ ಅವರೂ ಪುತ್ಥಳಿ ಅನಾವರಣ ಯಶಸ್ವಿಗೊಳಿಸಲು ಕರೆ ನೀಡಿದ್ದಾರೆ ಎಂದರು.

ಹಿರಿಯ ವಕೀಲ ಜಯರಾಂ, ನಾರಾಯಣಪ್ಪ, ಮೀನಳ್ಳಿ ಡಿ. ತಾಯಣ್ಣ, ಮಾಜಿ ಮೇಯರ್ ನಾಗಮ್ಮ, ಮಾಜಿ ಉಪ ಮೇಯರ್ ಜಾನಕಮ್ಮ, ಪಾಲಿಕೆಯ ಸದಸ್ಯ ಹನುಮಂತಪ್ಪ, ಕಾಂಗ್ರೆಸ್ ಮುಖಂಡರಾದ ಸದಾಶಿವಪ್ಪ, ವೀರೇಶಪ್ಪ, ಮೀಸೆ ರಾಮಣ್ಣ, ಪಿ. ಜಗನ್ನಾಥ, ಮುದಿಮಲ್ಲಯ್ಯ, ಮೋಕ ಮಲ್ಲಯ್ಯ, ಪರಶುರಾಮ, ಯರಗುಡಿ ಸೋಮಣ್ಣ, ಹಗರಿ ಗೋವಿಂದ, ಹಾವಂಭಾವಿ ಲೋಕೇಶ್, ಬೆಣಕಲ್ ಸುರೇಶ್, ವಂಡ್ರಪ್ಪ, ಸಂಗನಕಲ್ಲು ವಿಜಯ್, ಬಸರಕೋಡು ಗೋವಿಂದು, ಟಿ.ಹೆಚ್. ಚರಣರಾಜ್, ಲಾಲಸ್ವಾಮಿ, ನರೇಂದ್ರ, ಗೌತಮ್ ಇನ್ನಿತರರು ಸಭೆಯಲ್ಲಿ ಶಾಸಕರ ಕುರಿತು ಮೆಚ್ಚುಗೆ ಮಾತುಗಳನ್ನಾಡಿದರು.

ಸಭೆಗೂ ಮುನ್ನ ಮಹರ್ಷಿ ಶ್ರೀ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಬೇನ್ಪಾಡ್ ಹನುಮಂತಪ್ಪ, ಮಾಜಿ ಮಹಾನಗರ ಪಾಲಿಕೆ ಸದಸ್ಯ ಕಿಟ್ಟ, ಕಪ್ಪಗಲ್ಲು ರಾಮಣ್ಣ, ಕೆ. ನಾರಾಯಣಪ್ಪ, ಮೀನಳ್ಳಿ ವೆಂಕಟೇಶ್, ಬತ್ರಿ ಈರಣ್ಣ, ಅದ್ದಿಗೇರಿ ರಾಮಣ್ಣ, ಕಗ್ಗಲ್ ವೀರೇಶಪ್ಪ, ಪೆÇೀಸ್ಟ್ ವೆಂಕಟೇಶ್, ವಕೀಲರು ಬಾದಾಮಿ ಶಿವಲಿಂಗ ನಾಯಕ, ನಾಗರಾಜ ನಾಯಕ, ಬಾಲರಾಜು, ಹರಿ, ಪುಷ್ಪಲತಾ, ರಾಯಪುರ ಮರಿಸ್ವಾಮಿ, ಮೋಕ ಗೋವಿಂದಪ್ಪ, ಪೆದ್ದ ಎರ್ರಿಸ್ವಾಮಿ ಸ್ವಾಮಿ, ಮೋಕ ರಾಮಯ್ಯ, ಅಲ್ಲೀಪುರ ವೆಂಕಟಸ್ವಾಮಿ, ದುರ್ಗಾ ಮೋಹನ್, ಬಜ್ಜಪ್ಪ ಸೇರಿದಂತೆ ಹಲವರು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande