ಕಾಂಗ್ರೆಸ್ ಸರ್ಕಾರದ ವಿರುದ್ಧ ರೆಡ್ಡಿ ಕಿಡಿ
ತಿರುಗೇಟು
ರೆಡ್ಡಿ


ವಿಜಯಪುರ, 04 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಾಜ್ಯದಲ್ಲಿ ರೈತರನ್ನು ನಿರ್ಲಕ್ಷ ಮಾಡಲಾಗಿದೆ. ನಾವು ರಾಜ್ಯದಲ್ಲಿ ಟ್ರ್ಯಾಕ್ಟರ್ ರ‍್ಯಾಲಿ, ಪ್ರತಿಭಟನೆ ಮಾಡ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರೈತ ವಿರೋಧಿ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು ವಿಜಯಪುರದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ರೈತರಿಗೆ ತೀವ್ರವಾದ ಅನ್ಯಾಯ ಆಗಿದೆ. ರೈತ ವಿರೋಧಿ ನೀತಿಯನ್ನು ಸಿದ್ದರಾಮಯ್ಯ ಸರ್ಕಾರ ಅನುಸರಿಸುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಖಚಿತ. ರೈತರಿಗೆ ಬೀದಿಗೆ ಬಿದ್ದು ಹೋರಾಟ ಮಾಡ್ತಿದ್ದಾರೆ. ಅವರು ರೈತರಿಗೆ ಒಂದು ಗಂಟೆ ಸಮಯ ಕೊಟ್ಟಿದ್ದರೆ ಸಾಕಾಗುತ್ತಿತ್ತು ಎಂದರು.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ತಮ್ಮ ಕುರ್ಚಿ ಗುದ್ದಾಟದಲ್ಲಿ ಇದ್ದಾರೆ. ಕೊನೆ ಪಕ್ಷ ಮಂತ್ರಿಗಳಾದ್ರೂ ರೈತರ ಹೋರಾಟಕ್ಕೆ ಭೇಟಿ ನೀಡಿ ಸಾಂತ್ವನ ಹೇಳಬಹುದಿತ್ತು. ಜಿಲ್ಲೆಯ ಸಂಬಂದಪಟ್ಟ ಸಚಿವರಾದ್ರು ಬರಬೇಕಿತ್ತು. ರೈತರನ್ನ ಕರೆದು ಅವರ ಸಮಸ್ಯೆ ಆಲಿಸಿ ಸಮಾಧಾನ ಹೇಳಬಹುದಿತ್ತು. ಅದಕ್ಕೆ ಯಾಕೆ ಗೊಂದಲಕ್ಕೆ ಬೀಳೋದು ಅಂತಾ ಯೋಚಿಸುತ್ತಿದ್ದಾರೆ. ರೈತರು ಹಾಳಾದ್ರೂ ನಮ್ಮ ಸಚಿವ ಸ್ಥಾನ ಇರಲಿ ಎನ್ನುವಂತಾಗಿದೆ ಎಂದು ತಿರುಗೇಟು ನೀಡಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande