
ಬಳ್ಳಾರಿ, 04 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ, ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ನೌಕರರಿಗಾಗಿ ಮತ್ತು ಕುಟುಂಬ ಪಿಂಚಣಿ ಪಡೆಯುತ್ತಿರುವ ನಿವೃತ್ತ ಅಂಚೆ ನೌಕರರ ಕುಟುಂಬದವರಿಗಾಗಿ ಡಿಸೆಂಬರ್ 12 ರ ಶುಕ್ರವಾರ ಸಂಜೆ 04 ಗಂಟೆಗೆ ಬಳ್ಳಾರಿ ವಿಭಾಗೀಯ ಅಂಚೆ ಕಚೇರಿಯಲ್ಲಿ ಪಿಂಚಣಿ ಅದಾಲತ್ ಏರ್ಪಡಿಸಲಾಗಿದೆ.
ಪಿಂಚಣಿದಾರರು ತಮ್ಮ ಕುಂದು-ಕೊರತೆಗಳಿದ್ದಲ್ಲಿ ಬಳ್ಳಾರಿ ವಿಭಾಗದ ಕೋಟೆ ಪ್ರದೇಶದ ಅಂಚೆ ವಿಭಾಗೀಯ ಕಾರ್ಯಾಲಯ ಅಧೀಕ್ಷಕರ ಕಚೇರಿಗೆ ಡಿ.10 ರೊಳಗಾಗಿ ಮುಂಚಿತವಾಗಿ ತಲುಪುವಂತೆ ಪತ್ರ ಮೂಲಕ ಅಥವಾ doballari.ka@indiapost.gov.in ಗೆ ಇ-ಮೇಲ್ ಮುಖಾಂತರ ಕಳುಹಿಸಿಕೊಡಬಹುದು. ತಮ್ಮ ಅಹವಾಲುನೊಂದಿಗೆ ಡಿ.12 ರಂದು ನಡೆಯುವ ಪಿಂಚಣಿ ಅದಾಲತ್‍ನಲ್ಲಿ ಭಾಗವಹಿಸಬಹುದಾಗಿದೆ ಎಂದು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್