ಇ-ಸ್ವತ್ತು ತಂತ್ರಾಂಶ : ಸಹಾಯವಾಣಿ
ಕೊಪ್ಪಳ, 04 ಡಿಸೆಂಬರ್ (ಹಿ.ಸ.) ಆ್ಯಂಕರ್: ಇ-ಸ್ವತ್ತು ತಂತ್ರಾಂಶದ ಹೊಸ ಅವತರಣಿಕೆಯನ್ನು ಅನುಷ್ಠಾನ ಮಾಡಿರುವುದರಿಂದ ಪ್ರಾರಂಭದಲ್ಲಿ ಸಾರ್ವಜನಿಕರ ಕರೆಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತಿ ವತಿಯಿಂದ ಸಹಾಯವಾಣಿ ಪ್ರಾರಂಭಿಸಿದ್ದು, ಇ-ಸ್ವತ್ತು ತಂತ್ರಾ0ಶ ಹಾಗೂ ನಿಯಮಗಳನ್ವಯ ಉತ್ತರಿಸುವ ಬಗ್ಗೆ,
ಇ-ಸ್ವತ್ತು ತಂತ್ರಾಂಶ : ಸಹಾಯವಾಣಿ


ಕೊಪ್ಪಳ, 04 ಡಿಸೆಂಬರ್ (ಹಿ.ಸ.)

ಆ್ಯಂಕರ್: ಇ-ಸ್ವತ್ತು ತಂತ್ರಾಂಶದ ಹೊಸ ಅವತರಣಿಕೆಯನ್ನು ಅನುಷ್ಠಾನ ಮಾಡಿರುವುದರಿಂದ ಪ್ರಾರಂಭದಲ್ಲಿ ಸಾರ್ವಜನಿಕರ ಕರೆಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತಿ ವತಿಯಿಂದ ಸಹಾಯವಾಣಿ ಪ್ರಾರಂಭಿಸಿದ್ದು, ಇ-ಸ್ವತ್ತು ತಂತ್ರಾ0ಶ ಹಾಗೂ ನಿಯಮಗಳನ್ವಯ ಉತ್ತರಿಸುವ ಬಗ್ಗೆ, ಮಾರ್ಗದರ್ಶನ ನೀಡಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ನಿಯೋಜಿಸಿ ಆದೇಶಿಸಲಾಗಿದೆ.

ಜಿಲ್ಲಾ ಪಂಚಾಯತಿಯ ಆದೇಶದನ್ವಯ ಕುಷ್ಟಗಿ ತಾಲ್ಲೂಕಿನ ಹನುಮನಾಳ ಗ್ರಾಮ ಪಂಚಾಯತಿ ಪಿಡಿಒ ಪ್ರಶಾಂತ್ ಹಿರೇಮಠ್ ಅವರು ಡಿಸೆಂಬರ್ 5, ಡಿ.10, ಡಿ.16, ಡಿ.20 ಹಾಗೂ ಡಿ.26 ರಂದು, ಕುಕನೂರು ತಾಲ್ಲೂಕಿನ ಭಾನಾಪುರ ಗ್ರಾಮ ಪಂಚಾಯತಿ ಪಿಡಿಒ ರಮೇಶ್ ತಿಮ್ಮಾರೆಡ್ಡಿ ಅವರು ಡಿ.6, ಡಿ.11, ಡಿ.17, ಡಿ.22 ಹಾಗೂ ಡಿ.29 ರಂದು, ಗಂಗಾವತಿ ತಾಲ್ಲೂಕಿನ ಕೇಸರಹಟ್ಟಿ ಗ್ರಾಮ ಪಂಚಾಯತಿ ಪಿಡಿಒ ಶಂಶೀರ್ ಅಲಿ ಅವರು ಡಿ.8, ಡಿ.12, ಡಿ.18, ಡಿ.23 ಹಾಗೂ ಡಿ.30 ರಂದು ಮತ್ತು ಯಲಬುರ್ಗಾ ತಾಲ್ಲೂಕಿನ ಬೇವೂರು ಗ್ರಾಮ ಪಂಚಾಯತಿ ಪಿಡಿಒ ಅಬ್ದುಲ್ ಗಫರ್ ಅವರು ಡಿ.9, ಡಿ.15, ಡಿ.19, ಡಿ.24 ಹಾಗೂ ಡಿ.31 ರಂದು ಜಿಲ್ಲಾ ಪಂಚಾಯತಿ ಕಾರ್ಯಾಲಯಕ್ಕೆ ಹಾಜರಾಗಿ ಬೆಳಿಗ್ಗೆ 9 ಗಂಟೆಯಿ0ದ ಸಂಜೆ 6 ಗಂಟೆಯವರೆಗೆ ಕರ್ತವ್ಯ ನಿರ್ವಹಿಸಬೇಕು.

ಸಹಾಯವಾಣಿ ಸಂಖ್ಯೆ:08539221207 ಆಗಿದ್ದು, ಸಾರ್ವಜನಿಕರು 2 ಮತ್ತು 4ನೇ ಶನಿವಾರ, ಭಾನುವಾರ ಹಾಗೂ ರಜೆ ದಿನಗಳನ್ನು ಹೊರತುಪಡಿಸಿ ಮೇಲೆ ತಿಳಿಸಿದ ದಿನಾಂಕಗಳ0ದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ಕಚೇರಿ ಅವಧಿಯಲ್ಲಿ ಸಹಾಯವಾಣಿಗೆ ಸಂಪರ್ಕಿಸಿ ನಿಯೋಜಿತ ಅಧಿಕಾರಿಗಳಿಂದ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಪಂಚಾಯತ ಕಾರ್ಯಾಲಯ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande