ಬಳ್ಳಾರಿ : ಸ್ವಾತಂತ್ರ್ಯ ಹೋರಾಟಗಾರ ಕೋಲಾಚಲಂ ವೆಂಕಟರಾವ್ ಪುತ್ಥಳಿ ನಿರ್ಮಿಸಲು ಮನವಿ
ಬಳ್ಳಾರಿ, 04 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಪರಿವರ್ತನಕಾರ ದಿವಂಗತ ಕೋಲಾಚಲಂ ವೆಂಕಟರಾವ್ ಅವರ ಪುತ್ಥಳಿ ಮತ್ತು ನಾಮಫಲಕವನ್ನು ಅಳವಡಿಸಲು ಕೋರಿ ಕೋಲಾಚಲಂ ಕುಟುಂಬದ ಸದಸ್ಯರು ಮತ್ತು ಆಪ್ತರು ಶಾಸಕ ನಾರಾ ಭರತರೆಡ್ಡಿ ಅವರಲ್ಲಿ ಗುರುವಾರ ಮನವಿ ಸಲ್ಲಿಸಿದೆ. ಕೋಲಾಚ
ಬಳ್ಳಾರಿ : ಸ್ವಾತಂತ್ರ್ಯ ಹೋರಾಟಗಾರ ಕೋಲಾಚಲಂ ವೆಂಕಟರಾವ್ ಪುತ್ಥಳಿ ನಿರ್ಮಿಸಲು ಮನವಿ

ಬಳ್ಳಾರಿ : ಸ್ವಾತಂತ್ರ್ಯ ಹೋರಾಟಗಾರ ಕೋಲಾಚಲಂ ವೆಂಕಟರಾವ್ ಪುತ್ಥಳಿ ನಿರ್ಮಿಸಲು ಮನವಿ

ಬಳ್ಳಾರಿ : ಸ್ವಾತಂತ್ರ್ಯ ಹೋರಾಟಗಾರ ಕೋಲಾಚಲಂ ವೆಂಕಟರಾವ್ ಪುತ್ಥಳಿ ನಿರ್ಮಿಸಲು ಮನವಿ

ಬಳ್ಳಾರಿ, 04 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಪರಿವರ್ತನಕಾರ ದಿವಂಗತ ಕೋಲಾಚಲಂ ವೆಂಕಟರಾವ್ ಅವರ ಪುತ್ಥಳಿ ಮತ್ತು ನಾಮಫಲಕವನ್ನು ಅಳವಡಿಸಲು ಕೋರಿ ಕೋಲಾಚಲಂ ಕುಟುಂಬದ ಸದಸ್ಯರು ಮತ್ತು ಆಪ್ತರು ಶಾಸಕ ನಾರಾ ಭರತರೆಡ್ಡಿ ಅವರಲ್ಲಿ ಗುರುವಾರ ಮನವಿ ಸಲ್ಲಿಸಿದೆ.

ಕೋಲಾಚಲಂ ವಿಶ್ವಪ್ರಕಾಶ್ ಅವರ ನೇತೃತ್ವದಲ್ಲಿ ಅನೇಕರು, ಶಾಸಕರನ್ನು ಭೇಟಿ ಮಾಡಿದ ತಂಡವು, ಕೋಲಾಚಲಂ ವೆಂಕಟರಾವ್ ಅವರ ಹುಟ್ಟು, ಬೆಳವಣಿಗೆ ಮತ್ತು ಸಾಧನೆಯ ಕುರಿತು ವಿವರಣೆ ನೀಡಿ, ಕೋಲಾಚಲಂ ವೆಂಕಟರಾವ್ ಅವರ ಪುತ್ಥಳಿ ಮತ್ತು ನಾಮಫಲಕವನ್ನು ನಗರದಲ್ಲಿ ಅಳವಡಿಸಲು ಕೋರಿ ಮನವಿ ಸಲ್ಲಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾಧ್ಯಕ್ಷರಾದ ಡಾ. ಶ್ರೀನಾಥ್, ಅಖಿಲ ಕರ್ನಾಟಕದ ಬ್ರಾಹ್ಮಣ ಮಹಾಸಭಾದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಸತೀಶ್ ದೇಸಾಯಿ, ಸಿಮೆಂಟ್ ಗಿರಿ ಪ್ರಸಾದ್, ನೇಮಕಲ್ ರಾವ್, ಮಂಜುನಾಥ್ ಭಟ್, ಕೆ. ಪ್ರಕಾಶ್, ಜೋಯಿಸ್ ಶ್ರೀನಾಥ್, ಬಾದನಹಟ್ಟಿ ರಘುನಂದನ, ಸಮರ್ಥ, ಹರಿಪ್ರಸಾದ್ ಇನ್ನಿತರರು ಈ ಈ ತಂಡದಲ್ಲಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

 rajesh pande