5 ವರ್ಷದೊಳಗಿನ ಪ್ರತಿ ಮಗುವಿಗೂ ಪಲ್ಸ್ ಪೋಲಿಯೋ ಹಾಕಿಸಿ
ಬಳ್ಳಾರಿ, 04 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಡಿ.21 ರಂದು ನಡೆಯುವ ಪಲ್ಸ್ ಪೋಲೀಯೋ ಅಭಿಯಾನದಲ್ಲಿ ಹುಟ್ಟಿನಿಂದ 5 ವರ್ಷದೊಳಗಿನ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ತಪ್ಪದೇ ಹಾಕಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಪೋಷಕರಲ್ಲಿ ಮನವಿ ಮಾ
5 ವರ್ಷದೊಳಗಿನ ಪ್ರತಿ ಮಗುವಿಗೂ ಪಲ್ಸ್ ಪೋಲಿಯೋ ಹಾಕಿಸಿ


ಬಳ್ಳಾರಿ, 04 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಡಿ.21 ರಂದು ನಡೆಯುವ ಪಲ್ಸ್ ಪೋಲೀಯೋ ಅಭಿಯಾನದಲ್ಲಿ ಹುಟ್ಟಿನಿಂದ 5 ವರ್ಷದೊಳಗಿನ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ತಪ್ಪದೇ ಹಾಕಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಪೋಷಕರಲ್ಲಿ ಮನವಿ ಮಾಡಿದ್ದಾರೆ.

ಈ ಹಿಂದೆ ಎಷ್ಟು ಬಾರಿ ಹಾಕಿಸಿದ್ದರೂ ಸಹ ತಪ್ಪದೇ ಲಸಿಕೆ ಹಾಕಿಸಬೇಕು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ, ಬಸ್ ನಿಲ್ದಾಣ, ರೈಲು ನಿಲ್ದಾಣ, ಅಂಗನವಾಡಿಗಳಲ್ಲಿ, ಶಾಲೆಗಳಲ್ಲಿ ಹಾಗೂ ಕೊಳಚೆ ಪ್ರದೇಶ ಸೇರಿದಂತೆ ಮುಂತಾದೆಡೆ ತೆರೆಯುವ ಪೋಲಿಯೋ ಬೂತ್ ಗಳಲ್ಲಿ ತಪ್ಪದೇ ಲಸಿಕೆ ಹಾಕಿಸಬೇಕು. ಜೀವದ ಎರಡು ಹನಿಗಳಿಂದ ಪೋಲಿಯೋ ಪಿಡುಗಿನ ಮೇಲೆ ವಿಜಯ ಸಾಧಿಸುವುದನ್ನು ಮುಂದುವರೆಸೋಣ ಎಂದು ಅವರು ವಿನಂತಿಸಿದ್ದಾರೆ.

ಎರಡು ಹನಿ ಪೋಲಿಯೋ ಲಸಿಕೆ ಹಾಕಿಸಿ ನಿಮ್ಮ ಮಗುವನ್ನು ಪೋಲಿಯೋ ರೋಗದಿಂದ ಜೀವನ ಪೂರ್ತಿ ರಕ್ಷಿಸಿ, ಪೋಲಿಯೋ ಮೇಲಿನ ನಮ್ಮ ಗೆಲುವಿಗೆ ಎರಡು ಹನಿಗಳು ಸಾಕು ಪೋಲಿಯೋ ಕೊನೆಗಾಣಿಸಿ ಪೋಲಿಯೋ ರಹಿತ ವಿಶ್ವದ ಕನಸು ನನಸಾಗಿಸಿ ಎಂದು ಮನವಿ ಮಾಡಿದ್ದಾರೆ.

ಕ್ಷೇತ್ರ ಮಟ್ಟದಲ್ಲಿ ಎಲ್ಲಾ ಪ್ರದೇಶಗಳಿಗೆ ವೈದ್ಯಾಧಿಕಾರಿಗಳು, ಕ್ಷೇತ್ರ ಮಟ್ಟದ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಭೇಟಿ ಮಾಡಿ ಸಾರ್ವಜನಿಕರಿಗೆ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲಿದ್ದು, ಜಿಲ್ಲೆಯ ಎಲ್ಲಾ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ 2 ಹನಿ ಹಾಕಿಸುವಂತೆ ತಿಳಿಸಲಿದ್ದಾರೆ.

ಗಡಿ ಮತ್ತು ವಲಸೆ ಜನಸಂಚಾರ ಪ್ರದೇಶಗಳಲ್ಲಿ ವಿಶೇಷ ಶಿಬಿರಗಳು ರೈಲು ನಿಲ್ದಾಣ, ಬಸ್ ನಿಲ್ದಾಣ, ದೇಗುಲ, ಮೇಳ, ಗಡಿಭಾಗಗಳಲ್ಲಿ ಲಸಿಕಾಕರಣ ಕುರಿತು ಮಾಹಿತಿ ನೀಡಲು ಇಂದಿನಿ0ದಲೇ ಕ್ರಮವಹಿಸಲಾಗುತ್ತಿದೆ. ಟಿವಿ, ರೇಡಿಯೋ, ಜಾಗೃತಿ ಜಾಥಾ, ಪೋಸ್ಟರ್‌ಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಎಲ್ಲ ತಾಲೂಕಿನ ಎಲ್ಲ ವಸತಿ ಪ್ರದೇಶಗಳು, ವಲಸೆ ಪ್ರದೇಶಗಳು, ಕಟ್ಟಡ ನಿರ್ಮಾಣ ಪ್ರದೇಶಗಳು, ಇಟ್ಟಿಗೆ ಬಟ್ಟಿ, ಕುರಿಗಾಯಿಗಳು ತಂಗಿರುವ ಸ್ಥಳಗಳು, ಕೊಳಚೆ ಪ್ರದೇಶಗಳು ತೋಟದ ಮನೆ, ದೊಡ್ಡಿ, ಹಟ್ಟಿ, ಕ್ಯಾಂಪ್‌ಗಳು, ನಗರಗಳಲ್ಲಿಯ ಅಪಾರ್ಟ್ಮೆಂಟ್‌ಗಳು ಸೇರಿದಂತೆ ಎಲ್ಲ ಸ್ಥಳಗಳಲ್ಲಿಯ ಮಕ್ಕಳ ಸಂಖ್ಯೆಯನ್ನು ಪಟ್ಟಿ ಮಾಡಿಕೊಳ್ಳಲಾಗಿದ್ದು, ಈ ಹಿಂದೆ ಪೋಲಿಯೋ ಹನಿ ಹಾಕಿಸಿದ್ದರೂ ಸಹ ಪಾಲಕರು ತಮ್ಮ ಮಕ್ಕಳಿಗೆ ತಪ್ಪದೇ ಎರಡು ಹನಿ ಪೋಲಿಯೋ ದ್ರಾವಣ ಹಾಕಿಸಬೇಕು ಎಂದು ಅವರು ಕೋರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande