ಫೋನ್ ಪೇ ಮೂಲಕ ವ್ಯಾಪಾರಿಯಿಂದ ಲಂಚ ಪಡೆದ ಅರಣ್ಯ ಇಲಾಖೆಯ ನೌಕರರ ಅಮಾನತು
ಫೋನ್ ಪೇ ಮೂಲಕ ವ್ಯಾಪಾರಿಯಿಂದ ಲಂಚ ಪಡೆದ ಅರಣ್ಯ ಇಲಾಖೆಯ ನೌಕರರ ಅಮಾನತು
ಚಿತ್ರ. ಹರೀಶ್ ಮತ್ತು ನಾಗರಾಜಪ್ಪ


ಕೋಲಾರ, ೦೩ ಡಿಸೆಂಬರ್(ಹಿ.ಸ) :

ಆ್ಯಂಕರ್ : ಮರಗಳ ವ್ಯಾಪಾರಿಯಿಂದ ಫೋನ್ ಪೇ ಮೂಲಕ ಲಂಚ ಪಡೆದ ಕೋಲಾರ ತಾಲ್ಲೂಕಿನ ಅರಣ್ಯ ಇಲಾಖೆಯ ಕೋಲಾರ ನಗರ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಹರೀಶ್ ಮತ್ತು ಅರಳಕುಂಟೆ ನೆಡುತೋಪು ಕಾವಲುಗಾರ ಟಿ.ವಿ.ರಾಜೇಶ್ ರವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಬೆಂಗಳೂರು ವಲಯದ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಸೇನ್‌ಗುಟವಾಲ್ ಆದೇಶ ಹೊರಡಿಸಿದ್ದಾರೆ.

ಕೋಲಾರ ತಾಲ್ಲೂಕಿನ ಹುತ್ತೂರು ಹೋಬಳಿಯ ಚಾಮರಹಳ್ಳಿಯ ಮುನಿಶಾಮಪ್ಪ ಎಂಬುವರು ವೆಂಕರಾಮಪ್ಪ ಎಂಬುವರ ಜಮೀನಿನಲ್ಲಿದ್ದ ಆಲದ ಮರವನ್ನು ಖರೀದಿ ಮಾಡಿ ಕಡಿದು ಸಾಗಾಣಿಕೆ ಮಾಡುತ್ತಿದ್ದರು. ಕೋಲಾರಕ್ಕೆ ಸಾಗಾಣಿಕೆ ಮಾಡುತ್ತಿದ್ದಾಗ ಕೋಲಾರ ನಗರದ ಹೊರವಲಯದ ಬೇತಮಂಗಲ ರಸ್ತೆಯಲ್ಲಿ ಟ್ರಾಕ್ಟರ್ ಅಡ್ಡಗಟ್ಟಿದ ಉಪರಣ್ಯ ವಲಯ ಅಧಿಕಾರಿ ಹರಿಶ್ ಲಂಚ ನೀಡುವಂತೆ ಒತ್ತಾಯಿಸಿದರು. ಕಾವಲುಗಾರ ರಾಜೇಶ್ ಫೋನ್ ಪೇಗೆ ಮುನಿಶಾಮಪ್ಪ ನಲವತೈದು ಸಾವಿರ ರೂಪಾಯಿ ವರ್ಗಾವಣೆ ಮಾಡಿದ್ದರು. ಕೆಲವೇ ಕ್ಷಣಗಳಲ್ಲಿ ರಾಜೇಶ್ ಹರೀಶ್‌ರವರಿಗೆ ಹಣ ವರ್ಗಾವಣೆ ಮಾಡಿದ್ದರು ಎಂದು ಆರೋಪಿಸಲಾಗಿದೆ.

ಅರಣ್ಯಾಧಿಕಾರಿಯ ಲಂಚದ ಬಗ್ಗೆ ರೈತ ಸಂಘದ ಅಧ್ಯಕ್ಷ ಕೋಟಿಗಾನಹಳ್ಳಿಯ ಗಣೇಶ್‌ಗೌಡರು ಕೋಲಾರ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಮತ್ತು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡಿದ್ದರು. ಉಪರಣ್ಯ ಸಂರಕ್ಷಾಧಿಕಾರಿಯವರು ಇಲಾಖೆಯ ವಿಚಾರಣೆಗೆ ಆದೇಶ ಮಾಡಿದ್ದರು. ಅರಣ್ಯ ಇಲಾಖೆಯ ಲಂಚಬಾಕತನದ ಬಗ್ಗೆ ಕೋಲಾರದಲ್ಲಿ ನಡೆದ ಕೆ.ಡಿ.ಪಿ ಸಭೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದಿದ್ದರು. ತಪ್ಪಿಸ್ಥ ಅಧಿಕಾರಿಗಳ ವಿರುಧ್ದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.

ಇಲಾಖೆಯಿಂದ ವಿವಾರಣೆ ನಡೆಯುತ್ತಿದ್ದು ವರದಿಯನ್ನು ಬೆಂಗಳೂರು ವಲಯದ ಅರಣ್ಯ ಸಂರಕ್ಚಣಾಧಿಕಾರಿಗಳಿಗೆ ಸಲ್ಲಿಸಲಾಗುವುದು. ವಿಚಾರಣಾ ವರದಿಯನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದ್ದರು.

ಮರಗಳನ್ನು ಕಟಾವು ಮಾಡಿ ಸಾಗಾಣಿಕೆ ಮಾಡಲು ಅರಣ್ಯ ಇಲಾಖೆಯಿಂದ ಅಗತ್ಯ ಪರವಾನಿಗೆ ಪಡೆಯಬೇಕಾಗುತ್ತದೆ. ಈ ಪ್ರಕರಣದಲ್ಲಿ ಟ್ರಾಕ್ಟರ್ ಜಪ್ತಿ ಮಾಡಿದ ಮೇಲೆ ದಂಡ ವಿಧಿಸಿ ಬಿಡುಗಡೆ ಮಾಡಬೇಕಾಗಿತ್ತು. ಆದರೆ ಬದಲಾಗಿ ಲಂಚ ಪಡೆದು ಕರ್ನಾಟಕ ನಾಗರೀಕ ಸೇವಾ ನಿಯಮಗಳಿಗೆ ವಿರುಧ್ದವಾಗಿ ಉಪ ವಲಯ ಅರಣ್ಯ ಅಧಿಕಾರಿ ಹರೀಶ್ ಮತ್ತು ಕಾವಲುಗಾರ ರಾಜೇಶ್ ನಡೆದುಕೊಂಡಿದದಾರೆ ಎಂದು ಇಲಾಖಾ ವಿಚಾರಣೆ ನಡೆಸಿದ ಅಧಿಕಾರಿ ವರದಿ ಸಲ್ಲಿಸಿದ್ದರು.

ಕಾವಲುಗಾರ ರಾಜೇಶ್ ವಿಚಾರಣೆಯ ಸಮದಲ್ಲಿ ಹಾಜರಾಗಿ ಟ್ರಾಕ್ಟರ್ ಜಪ್ಪಿ ಮಾಡಿ ಕಚೇರಿಯ ಬಳಿ ತರಲಾಗಿತ್ತು.ಆದರೆ ಮುನಿಶಾಮಪ್ಪ ನನಗೆ ಪರಿಚಯವಿರುವ ಕಾರಣ ಟ್ಟಾಕ್ಟರ್ ವಾಪಸ್ ಕಳುಹಿಸಲಾಯಿತು. ವಾಹನ ಕರೀದಿ ಮಾಡಲು ಮುನಿಶಾಮಪ್ಪನವರ ತಾಯಿ ಪದ್ಮಮ್ಮನಿಂದ ಎಪ್ಪತ್ತು ಸಾವಿರ ರೂಪಾಯಿ ಸಾಲ ಪಡಿಯಲಾಗಿತ್ತು. ಹಂತಹಂತವಾಗಿ ಮರುಪಾವತಿ ಮಾಡಲಾಯಿತು ಎಂದು

ಹೇಳೀದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande