
ವಾರಣಾಸಿ, 03 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕಾಶಿ–ತಮಿಳು ಸಂಗಮ ಕಾರ್ಯಕ್ರಮದ ಅಂಗವಾಗಿ ಬುಧವಾರ ತಮಿಳುನಾಡಿನ ವಿದ್ಯಾರ್ಥಿಗಳು ವಾರಾಣಾಸಿಯ ಹನುಮಾನ್ ಘಾಟ್‌ನಲ್ಲಿ ಪವಿತ್ರ ಗಂಗಾನದಿಯಲ್ಲಿ ಸ್ನಾನ ಮಾಡಿ ಶುಭಾಶೀರ್ವಾದ ಪಡೆದರು. ಗಂಗಾಸ್ನಾನದ ನಂತರ ವಿದ್ಯಾರ್ಥಿಗಳು ಘಾಟ್ ಪ್ರದೇಶದಲ್ಲಿರುವ ಪ್ರಾಚೀನ ದೇವಾಲಯಗಳಿಗೆ ಭೇಟಿ ನೀಡಿ ಇತಿಹಾಸ, ಪರಂಪರೆ ಮತ್ತು ದೈವತ್ವದ ಕುರಿತು ಮಾಹಿತಿಯನ್ನು ಪಡೆದರು.
ಬೆಳಿಗ್ಗೆ ಹನುಮಾನ್ ಘಾಟ್ ತಲುಪಿದ ತಮಿಳು ವಿದ್ಯಾರ್ಥಿಗಳ ಗುಂಪಿಗೆ ಶಿಕ್ಷಕರು ಗಂಗೆಯ ವಿವಿಧ ಘಾಟ್‌ಗಳ ಪೌರಾಣಿಕತೆ ಹಾಗೂ ಇತಿಹಾಸವನ್ನು ವಿವರಿಸಿದರು. ನಂತರ ವಿದ್ಯಾರ್ಥಿಗಳು ಹನುಮಾನ್ ಘಾಟ್‌ನಲ್ಲಿರುವ ಮಹಾನ್ ತಮಿಳು ಕವಿ ಸುಬ್ರಹ್ಮಣ್ಯ ಭಾರತಿಯವರ ಮನೆಗೆ ಭೇಟಿ ನೀಡಿ, ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಾಹಿತ್ಯ ಪರಂಪರೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಭಾರತಿಯವರ ಮನೆಯ ಬಳಿಯಿರುವ ಗ್ರಂಥಾಲಯಕ್ಕೂ ವಿದ್ಯಾರ್ಥಿಗಳು ಭೇಟಿ ನೀಡಿ ಹಲವು ದಾಖಲೆಗಳು ಹಾಗೂ ಐತಿಹಾಸಿಕ ಮಾಹಿತಿಗಳ ಬಗ್ಗೆ ಆಸಕ್ತಿಯಿಂದ ಅಧ್ಯಯನ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa