ಹುಬ್ಬಳ್ಳಿ ಮತ್ತು ಪ್ರಯಾಗರಾಜ ನಡುವೆ ವಿಶೇಷ ರೈಲು ಸಂಚಾರ
ಹುಬ್ಬಳ್ಳಿ, 03 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಮಹಾ ಮೇಳದ ವ್ಯವಸ್ಥೆಗೆ ಅನುಕೂಲ ಕಲ್ಪಿಸಲು ಮತ್ತು ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು, ನೈಋತ್ಯ ರೈಲ್ವೆಯು ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ಪ್ರಯಾಗರಾಜ್ ಜಂಕ್ಷನ್ ನಡುವೆ ಒನ್-ವೇ ಕಾಯ್ದಿರಿಸದ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರವನ್ನ
ಹುಬ್ಬಳ್ಳಿ ಮತ್ತು ಪ್ರಯಾಗರಾಜ ನಡುವೆ ವಿಶೇಷ ರೈಲು ಸಂಚಾರ


ಹುಬ್ಬಳ್ಳಿ, 03 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಮಹಾ ಮೇಳದ ವ್ಯವಸ್ಥೆಗೆ ಅನುಕೂಲ ಕಲ್ಪಿಸಲು ಮತ್ತು ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು, ನೈಋತ್ಯ ರೈಲ್ವೆಯು ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ಪ್ರಯಾಗರಾಜ್ ಜಂಕ್ಷನ್ ನಡುವೆ ಒನ್-ವೇ ಕಾಯ್ದಿರಿಸದ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಕಾರ್ಯಾಚರಣೆ ಮಾಡಲಿದೆ.

ರೈಲು ಸಂಖ್ಯೆ 07351 ಎಸ್ಎಸ್ಎಸ್ ಹುಬ್ಬಳ್ಳಿ–ಪ್ರಯಾಗರಾಜ್ ಮೀಸಲಾತಿ ಒನ್-ವೇ ಕಾಯ್ದಿರಿಸದ ವಿಶೇಷ ಎಕ್ಸ್ ಪ್ರೆಸ್ ರೈಲು ಡಿಸೆಂಬರ್ 4, 2025 (ಗುರುವಾರ) ಮತ್ತು ಡಿಸೆಂಬರ್ 9, 2025 (ಮಂಗಳವಾರ) ರಂದು ಸಂಚರಿಸಲಿದೆ. ಈ ರೈಲು ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಸಂಜೆ 06:15 ಗಂಟೆಗೆ ಹೊರಟು ಕ್ರಮವಾಗಿ ಶನಿವಾರ ಮತ್ತು ಗುರುವಾರ ಪ್ರಯಾಗ್ ರಾಜ್’ಗೆ ಬೆಳಿಗ್ಗೆ 08:00 ಗಂಟೆಗೆ ತಲುಪಲಿದೆ.

ಈ ರೈಲು ಗದಗ, ಬದಾಮಿ, ಬಾಗಲಕೋಟೆ, ಆಲಮಟ್ಟಿ, ವಿಜಯಪುರ, ಸೋಲಾಪುರ, ದೌಂಡ್, ಅಹಮದ್ನಗರ, ಕೋಪರ್ಗಾಂವ್, ಮನ್ಮಾಡ್, ಭೂಸಾವಳ, ಖಾಂಡ್ವಾ, ಇಟಾರ್ಸಿ, ಪಿಪಾರಿಯಾ, ಜಬಲ್ಪುರ, ಕಟ್ನಿ, ಸತ್ನಾ ಮತ್ತು ಮಾಣಿಕ್ಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಈ ವಿಶೇಷ ರೈಲು 20 ಬೋಗಿಗಳನ್ನು ಒಳಗೊಂಡಿರುತ್ತದೆ, ಇದರಲ್ಲಿ 18 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು 2 ಎಸ್ಎಲ್ಆರ್/ಡಿ ಬೋಗಿಗಳು ಇರಲಿವೆ ಎಂದು ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande