ವಿಶೇಷ ಚೇತನರು ಸಮಾಜದಲ್ಲಿ ಸಮಾನರು : ಸ್ವರೂಪ್ ಪ್ರಕಾಶ್
ಹಾಸನ, 03 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಸಮಾಜದ ಪ್ರಗತಿಯಲ್ಲಿ ವಿಶೇಷ ಚೇತನರೂ ಸಮಾನವಾಗಿ ಭಾಗಿಯಾಗಬೇಕು. ಎಲ್ಲರೂ ಅವರನ್ನು ಸಮಾನ ದೃಷ್ಠಿಯಿಂದ ನೋಡಬೇಕು ಎಂದು ಶಾಸಕರಾದ ಸ್ವರೂಪ್ ಪ್ರಕಾಶ್ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚ
Swaroop


ಹಾಸನ, 03 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಸಮಾಜದ ಪ್ರಗತಿಯಲ್ಲಿ ವಿಶೇಷ ಚೇತನರೂ ಸಮಾನವಾಗಿ ಭಾಗಿಯಾಗಬೇಕು. ಎಲ್ಲರೂ ಅವರನ್ನು ಸಮಾನ ದೃಷ್ಠಿಯಿಂದ ನೋಡಬೇಕು ಎಂದು ಶಾಸಕರಾದ ಸ್ವರೂಪ್ ಪ್ರಕಾಶ್ ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲೆಯ ಎಲ್ಲಾ ವಿಕಲಚೇತನರ ಸಂಘ ಸಂಸ್ಥೆಗಳ ವತಿಯಿಂದ ಇಂದು ಡಾ|| ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ಅಂಗವಿಕಲರಿಗೆ ವಾಹನದ ಸೌಲಭ್ಯ ಸೇರಿದಂತೆ ಕೆಲವೊಂದು ಸೌಲಭ್ಯಗಳನ್ನು ನೀಡುವಾಗ ಇಂತಿಷ್ಟೇ ಜನರಿಗೆ ನೀಡಬೇಕು ಎಂದು ನಿಗಧಿ ಮಾಡುತ್ತದೆ. ಈ ರೀತಿ ಮಾಡದೆ ಜಿಲ್ಲೆಯಲ್ಲಿ ಎಷ್ಟು ಜನ ವಿಕಲಚೇತನರಿದವರು ಅಷ್ಟು ಜನಕ್ಕೂ ಕೂಡ ಸೌಲಭ್ಯಗಳು ದೊರೆಯುವಂತೆ ಮಾಡಬೇಕು ಇದರ ಕುರಿತು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande