ಹಿರಿಯ ಪತ್ರಕರ್ತ ಯಾವಗಲ್ ಮಠ ನಿಧನ
ನಾಳೆ ಅಂಕಣ ಮೃತರಿಗೆ ಇಬ್ಬರು
ಹಿರಿಯ ಪತ್ರಕರ್ತ ಯಾವಗಲ್ ಮಠ ನಿಧನ


ಗಂಗಾವತಿ, 03 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಹಿರಿಯ ಪತ್ರಕರ್ತ ಗಂಗಯ್ಯ ಯಾವಗಲ್ ಮಠ (55) ಬುಧವಾರ ಖಾಸಗಿ ಆಸ್ಪತ್ರೆಯ ಲ್ಲಿ ನಿಧನರಾದರು. ನಾಳೆ ಯಲಬುರ್ಗಾ ತಾಲೂಕು ಮುಧೋಳ ಗ್ರಾಮದಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಅವರ ಕುಟುಂಬ ವರ್ಗ ತಿಳಿಸಿದೆ.

ನಾಡಿನ ನಾನಾ ಪತ್ರಿಕೆಗಳಲ್ಲಿ ಇವರು ಕಾರ್ಯ ನಿರ್ವಹಿಸಿ ಉತ್ತಮ ಅಂಕಣ ಬರಹಗಾರರಾಗಿದ್ದರು. ಕಳೆದ 20 ವರ್ಷಗಳಿಂದ ಗಂಗಾವತಿಯಲ್ಲಿ ವಾಸವಾಗಿದ್ದರು. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande