
ನವದೆಹಲಿ, 03 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕೇಂದ್ರ ಸರ್ಕಾರ ‘ಸಂಚಾರ್ ಸಾಥಿ’ ಆಪ್ ಅನ್ನು ತೆಗೆಯಲಾಗದ ಸಿಸ್ಟಮ್ ಅಪ್ಲಿಕೇಶನ್ ಆಗಿ ಕಡ್ಡಾಯಗೊಳಿಸುವ ಕ್ರಮವು ದೇಶದ ಕೋಟ್ಯಂತರ ಸ್ಮಾರ್ಟ್‌ಫೋನ್ ಬಳಕೆದಾರರ ಗೌಪ್ಯತೆಗೆ ಗಂಭೀರ ಧಕ್ಕೆ ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕ ರಣದೀಪ ಸಿಂಗ್ ಸುರ್ಜೆವಾಲಾ ಆರೋಪಿಸಿದ್ದಾರೆ.
ಸುರ್ಜೆವಾಲಾ ಅವರು, ಈ ಆಪ್‌ನ್ನು ಬಳಕೆದಾರರ ಅನುಮತಿಯಿಲ್ಲದೆ ಫೋನ್‌ಗಳಲ್ಲಿ ಪೂರ್ವಸ್ಥಾಪಿತವಾಗಿ ಹಾಕುವುದು ಅಥವಾ ಸಾಫ್ಟ್‌ವೇರ್ ಅಪ್ಡೇಟ್ ಮೂಲಕ ಬಲವಂತವಾಗಿ ತಳ್ಳುವುದು, ಗೌಪ್ಯತೆಯ ಮೂಲಭೂತ ಹಕ್ಕಿನ ನೇರ ಉಲ್ಲಂಘನೆ ಎಂದು ಹೇಳಿದರು.
ಯಾವುದೇ ನಾಗರಿಕರ ವೈಯಕ್ತಿಕ ಮಾಹಿತಿಯನ್ನು ಕಾನೂನುಬದ್ಧ ಪ್ರಕ್ರಿಯೆ ಅಥವಾ ಪಾರದರ್ಶಕ ವ್ಯವಸ್ಥೆಯಿಲ್ಲದೆ ಸಿಸ್ಟಮ್ ಮಟ್ಟದಲ್ಲಿ ಸಂಗ್ರಹಿಸುವುದು ಗಂಭೀರ ಭದ್ರತಾ ಅಪಾಯವನ್ನು ಉಂಟುಮಾಡುತ್ತದೆ ಎಂದು ಸುರ್ಜೆವಾಲಾ ಎಚ್ಚರಿಸಿದರು.
ಈ ವಿಷಯದಲ್ಲಿ ಸರ್ಕಾರ ತಕ್ಷಣ ಸ್ಪಷ್ಟನೆ ನೀಡಬೇಕು ಹಾಗೂ ನಾಗರಿಕರ ಡೇಟಾ ಹಕ್ಕುಗಳನ್ನು ರಕ್ಷಿಸುವ ಭದ್ರತಾ ಕ್ರಮಗಳನ್ನು ಸಾರ್ವಜನಿಕವಾಗಿ ತಿಳಿಸಬೇಕು ಎಂದು ಅವರು ಒತ್ತಾಯಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa