ತತ್ಕಾಲ್ ಟಿಕೆಟ್‌ಗಳಿಗೆ ಒಟಿಪಿ ವ್ಯವಸ್ಥೆ ಜಾರಿಗೆ ರೇಲ್ವೆ ಇಲಾಖೆ ನಿರ್ಧಾರ
ನವದೆಹಲಿ, 03 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಪ್ರಯಾಣಿಕರ ಅನುಕೂಲತೆ ಹೆಚ್ಚಿಸುವುದು ಮತ್ತು ಟಿಕೆಟ್‌ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಭಾರತೀಯ ರೈಲ್ವೆ ಮಹತ್ವದ ಹೆಜ್ಜೆ ಇಟ್ಟಿದೆ. ಕೌಂಟರ್‌ಗಳಲ್ಲಿ ಖರೀದಿಸುತ್ತಿರುವ ತತ್ಕಾಲ್ ಟಿಕೆಟ್‌ಗಳಿಗೆ ಒಟಿಪಿ ಆಧಾರಿತ ದೃಢೀಕರಣವನ್ನು ಮುಂದಿನ ದಿನಗಳಲ್ಲಿ
ತತ್ಕಾಲ್ ಟಿಕೆಟ್‌ಗಳಿಗೆ ಒಟಿಪಿ ವ್ಯವಸ್ಥೆ ಜಾರಿಗೆ ರೇಲ್ವೆ ಇಲಾಖೆ ನಿರ್ಧಾರ


ನವದೆಹಲಿ, 03 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಪ್ರಯಾಣಿಕರ ಅನುಕೂಲತೆ ಹೆಚ್ಚಿಸುವುದು ಮತ್ತು ಟಿಕೆಟ್‌ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಭಾರತೀಯ ರೈಲ್ವೆ ಮಹತ್ವದ ಹೆಜ್ಜೆ ಇಟ್ಟಿದೆ. ಕೌಂಟರ್‌ಗಳಲ್ಲಿ ಖರೀದಿಸುತ್ತಿರುವ ತತ್ಕಾಲ್ ಟಿಕೆಟ್‌ಗಳಿಗೆ ಒಟಿಪಿ ಆಧಾರಿತ ದೃಢೀಕರಣವನ್ನು ಮುಂದಿನ ದಿನಗಳಲ್ಲಿ ದೇಶವ್ಯಾಪಿ ಜಾರಿಗೆ ತರುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ.

ರೈಲ್ವೆ ಸಚಿವಾಲಯದ ಹೇಳಿಕೆ ಪ್ರಕಾರ, ತತ್ಕಾಲ್ ಸೌಲಭ್ಯದ ದುರುಪಯೋಗವನ್ನು ತಡೆಯುವುದು, ಹಾಗೂ ನಿಜವಾದ ಪ್ರಯಾಣಿಕರಿಗೆ ಹೆಚ್ಚಿನ ಅವಕಾಶ ಒದಗಿಸುವುದು ಈ ಕ್ರಮದ ಮುಖ್ಯ ಉದ್ದೇಶ. ಈಗಾಗಲೇ ಜುಲೈ 2025ರಲ್ಲಿ ಆನ್‌ಲೈನ್ ತತ್ಕಾಲ್ ಟಿಕೆಟ್‌ಗಳಿಗೆ ಆಧಾರ್ ಆಧಾರಿತ ದೃಢೀಕರಣ, ಮತ್ತು ಅಕ್ಟೋಬರ್ 2025ರಲ್ಲಿ ಸಾಮಾನ್ಯ ಕಾಯ್ದಿರಿಸುವಿಕೆಯ ಮೊದಲ ದಿನದ ಆನ್‌ಲೈನ್ ಬುಕಿಂಗ್‌ಗಳಿಗೆ OTP ವ್ಯವಸ್ಥೆಯನ್ನು ರೈಲ್ವೆ ಜಾರಿಗೆ ತಂದಿತ್ತು. ಈ ಎರಡೂ ಕ್ರಮಗಳಿಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಪಾರದರ್ಶಕತೆ ಹೆಚ್ಚುವಿಕೆಯತ್ತ ಮಹತ್ವದ ಬದಲಾವಣೆ ತರಲಾಗಿತ್ತು.

ಈ ಹಿನ್ನೆಲೆಯಲ್ಲಿ, ನವೆಂಬರ್ 17, 2025ರಿಂದ ಕೌಂಟರ್‌ ತತ್ಕಾಲ್ ಟಿಕೆಟ್‌ಗಳಿಗೂ OTP ವ್ಯವಸ್ಥೆಯನ್ನು ಪ್ರಯೋಗಾತ್ಮಕವಾಗಿ ಪ್ರಾರಂಭಿಸಿದ್ದು, ಶೀಘ್ರದಲ್ಲೇ ಉಳಿದ ಎಲ್ಲಾ ರೈಲುಗಳಿಗೂ OTP ಆಧಾರಿತ ತತ್ಕಾಲ್ ಕಾಯ್ದಿರಿಸುವಿಕೆ ಕಡ್ಡಾಯವಾಗಲಿದೆ. ಇದರಿಂದ ಟಿಕೆಟ್‌ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಭದ್ರತೆ ಹಾಗೂ ಪ್ರಯಾಣಿಕರ ಅನುಕೂಲತೆ ಇನ್ನಷ್ಟು ಬಲಗೊಳ್ಳಲಿದೆ ಎಂದು ಇಲಾಖೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande