
ರಾಯಚೂರು, 03 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ರಾಯಚೂರು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವಾ ಏಜೆನ್ಸಿಗಳ ಮೂಲಕ, ಶುಚಿಗೊಳಿಸುವ ವ್ಯಕ್ತಿಗಳನ್ನು ನೇಮಿಸಿಕೊಳ್ಳಲು ಇ-ಟೆಂಡರ್ ಅಧಿಸೂಚನೆ ಹೊರಡಿಸಲಾಗಿದೆ.
ಇ-ಟೆಂಡರ್ ಅಧಿಸೂಚನೆಯ ಸಂಖ್ಯೆಯು ಎಚ್‌ಸಿಕೆ/2025-26/ಎಸ್‌ಇಒ115 ದಿ.02.12.2025 ಇದ್ದು, ಅರ್ಜಿಗಳನ್ನು 2025ರ ಡಿಸೆಂಬರ್ 17ರ ಸಂಜೆ 5 ಗಂಟೆಯೊಳಗೆ ಸ್ವೀಕರಿಸಲಾಗುವುದು. ಅರ್ಜಿ ಸಲ್ಲಿಸುವವರು ನಿಯಮಗಳು ಮತ್ತು ಷರತ್ತುಗಳಿಗನುಸಾರ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ರಾಯಚೂರು ನ್ಯಾಯಾಲಯದ ವೆಬ್‌ಸೈಟ್ ವಿಳಾಸ: https://raichur.dcourts.gov.in/notice-category/tenders/ ನ್ನು ಪರಿಶೀಲಿಸಬಹುದಾಗಿದೆ ಎಂದು ರಾಯಚೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್