ರಾಯಚೂರಲ್ಲಿ 2419 ಮನೆಗಳನ್ನು ನಿರ್ಮಿಸಿ ವಿತರಿಸುತ್ತಿರುವುದು ಮಹತ್ತರ : ಬೈರತಿ ಸುರೇಶ
ರಾಯಚೂರು, 03 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಜಿ+3 ಮಾದರಿಯಲ್ಲಿ ಅನುಮೋದನೆಗೊಂಡು, ಪ್ರಧಾನಮಂತ್ರಿ ಆವಾಸ್ ಯೋಜನೆಯ ಉಪ ಘಟಕ ಎಎಚ್‌ಪಿ ಯೋಜನೆಯಡಿ ರಾಯಚೂರು ಮಹಾನಗರ ಪಾಲಿಕೆಗೆ 54ನೇ ಸಿಎಸ್‌ಎಂಸಿಯಲ್ಲಿ, ಯರಮರಸ್ ಹತ್ತಿರದ ವಿಮಾನ ನಿಲ್ದಾಣ ಬಳಿಯಲ್ಲಿ ನಿರ್ಮಾಣ ಹಂತದಲ್ಲಿರುವ 2419 ವಸತಿ ಸಮುಚ್ಛಯದ ಸ
ರಾಯಚೂರಲ್ಲಿ 2419 ಮನೆಗಳನ್ನು ನಿರ್ಮಿಸಿ ವಿತರಿಸುತ್ತಿರುವುದು ಮಹತ್ತರ : ಬೈರತಿ ಸುರೇಶ


ರಾಯಚೂರಲ್ಲಿ 2419 ಮನೆಗಳನ್ನು ನಿರ್ಮಿಸಿ ವಿತರಿಸುತ್ತಿರುವುದು ಮಹತ್ತರ : ಬೈರತಿ ಸುರೇಶ


ರಾಯಚೂರಲ್ಲಿ 2419 ಮನೆಗಳನ್ನು ನಿರ್ಮಿಸಿ ವಿತರಿಸುತ್ತಿರುವುದು ಮಹತ್ತರ : ಬೈರತಿ ಸುರೇಶ


ರಾಯಚೂರಲ್ಲಿ 2419 ಮನೆಗಳನ್ನು ನಿರ್ಮಿಸಿ ವಿತರಿಸುತ್ತಿರುವುದು ಮಹತ್ತರ : ಬೈರತಿ ಸುರೇಶ


ರಾಯಚೂರು, 03 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಜಿ+3 ಮಾದರಿಯಲ್ಲಿ ಅನುಮೋದನೆಗೊಂಡು, ಪ್ರಧಾನಮಂತ್ರಿ ಆವಾಸ್ ಯೋಜನೆಯ ಉಪ ಘಟಕ ಎಎಚ್‌ಪಿ ಯೋಜನೆಯಡಿ ರಾಯಚೂರು ಮಹಾನಗರ ಪಾಲಿಕೆಗೆ 54ನೇ ಸಿಎಸ್‌ಎಂಸಿಯಲ್ಲಿ, ಯರಮರಸ್ ಹತ್ತಿರದ ವಿಮಾನ ನಿಲ್ದಾಣ ಬಳಿಯಲ್ಲಿ ನಿರ್ಮಾಣ ಹಂತದಲ್ಲಿರುವ 2419 ವಸತಿ ಸಮುಚ್ಛಯದ ಸ್ಥಳಕ್ಕೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಬೈರತಿ ಸುರೇಶ ಅವರು ಡಿಸೆಂಬರ್ 3ರಂದು ಭೇಟಿ ನೀಡಿದರು.

ಪೂರ್ವ ನಿಗದಿಯಂತೆ, ಬೆಳಗ್ಗೆ ಬಳ್ಳಾರಿಯಿಂದ ಹೆಲಿಕ್ಯಾಪ್ಟರ್ ಮೂಲಕ ಹೊರಟು ರಾಯಚೂರ ನಗರಕ್ಕೆ ಆಗಮಿಸಿ ಮಧ್ಯಾಹ್ನ 12.15ರ ವೇಳೆಗೆ ವಸತಿ ಸಮುಚ್ಛಯ ಸ್ಥಳಕ್ಕೆ ಆಗಮಿಸಿ ಕಾಮಗಾರಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಕಾಮಗಾರಿಯನ್ನು ಬೇಗನೇ ಪೂರ್ಣಗೊಳಿಸಿ, ಮನೆಗಳನ್ನು ಬಡಜನತೆಗೆ ವಿತರಿಸಲು ಕ್ರಮವಹಿಸುವಂತೆ ಸಚಿವರು ಸೂಚನೆ ನೀಡಿದರು.

ಈ ರೀತಿ, ಜಿ+3 ಸಮುಚ್ಛಯ ನಿರ್ಮಾಣ ಕಾರ್ಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಲ್ಲಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ನಡೆಯುತ್ತಿದೆ. ಬಡವರಿಗೆ ಮನೆಗಳನ್ನು ನಿರ್ಮಿಸಿ ಕೊಡುವ ಈ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ದಾಖಲೆಯ 2419 ಮನೆಗಳನ್ನು ನಿರ್ಮಿಸಿ ಕಡುಬಡವರಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾನ್ಯ ವರ್ಗದ ಹಾಗೂ ಹಿಂದುಳಿದ ವರ್ಗದ ಜನತೆಗೆ ನೀಡುತ್ತಿರುವುದು ರಾಯಚೂರ ಇತಿಹಾಸದಲ್ಲಿ ಪ್ರಪ್ರಥಮವಾದ ದಾಖಲಾರ್ಹ ಕಾರ್ಯವಾಗಿದೆ ಎಂದು ಸಚಿವರು ತಿಳಿಸಿದರು.

ಮೌಲಸೌಕರ್ಯ ಕಲ್ಪಿಸಲು ಕ್ರಮ: ರಾಯಚೂರು ವಿಮಾನ ನಿಲ್ದಾಣದ ಬಳಿಯಲ್ಲಿ ನಿರ್ಮಾಣವಾಗುತ್ತಿರುವ ಜಿ+3 ವಸತಿ ಸಮುಚ್ಚಯಕ್ಕೆ ಬೇಕಿರುವ ರಸ್ತೆ ಸಂಪರ್ಕ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಾರ್ಯಕ್ಕೆ ಬೇಕಾಗಿರುವ ಹೆಚ್ಚುವರಿ ಅನುದಾನವನ್ನು ನಗರಾಭಿವೃದ್ಧಿ ಇಲಾಖೆಯಿಂದ ಕೊಡುವುದಾಗಿ ಸಚಿವರು ಇದೆ ವೇಳೆ ತಿಳಿಸಿದರು.

ಈ ಮನೆಗಳನ್ನು 44 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮನೆಗಳ ನಿರ್ಮಾಣ ಕಾರ್ಯ ವಿವಿಧ ಹಂತಗಳಲ್ಲಿದೆ. ಪರಿಶಿಷ್ಟ ಜಾತಿಗೆ 951 ಮನೆಗಳು, ಪರಿಶಿಷ್ಟ ಪಂಗಡಕ್ಕೆ 1053 ಮನೆಗಳು, ಸಾಮಾನ್ಯ ವರ್ಗಕ್ಕೆ 228 ಮನೆಗಳು ಮತ್ತು ಹಿಂದುಳಿದ ವರ್ಗಕ್ಕೆ 187 ಮನೆಗಳು ಅನುಮೋದನೆಯಾಗಿವೆ. ಈ ಯೋಜನೆಯ ಅಂದಾಜು ವೆಚ್ಚ 9 ಲಕ್ಷ ಇರುತ್ತದೆ.

ಎಸ್‌ಎಸಿ ಮತ್ತು ಎಸ್‌ಟಿ ಅವರಿಗೆ ಕೇಂದ್ರ ಮತ್ತು ರಾಜ್ಯದಿಂದ ಸಬ್ಸಿಡಿ ಅನುದಾನ ರಾಜ್ಯ ಸರ್ಕಾರದಿಂದ 2 ಲಕ್ಷ ರೂ ಹಾಗೂ ಕೇಂದ್ರ ಸರ್ಕಾರದ 1.5 ಲಕ್ಷ ರೂ ಅನುದಾನ ಸೇರಿ ಒಟ್ಟು 3.50 ಲಕ್ಷ ರೂ ನಿಗದಿಪಡಿಸಲಾಗಿದೆ. ಬ್ಯಾಂಕಿನಿAದ ಲೋನ್ ಪಡೆದು ಬಾಕಿ ಉಳಿದ ಅನುದಾನವನ್ನು ಫಲಾನುಭವಿಗಳೇ ಭರಿಸಬೇಕಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ ಹಾಗೂ ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ ಅವರು ಸಚಿವರಿಗೆ ಮಾಹಿತಿ ನೀಡಿದರು.

ಈ ವೇಳೆ ಮಸ್ಕಿ ಶಾಸಕರಾದ ಬಸನಗೌಡ ತುರವಿಹಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜಶೇಖರ ರಾಮಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ., ಏಗನೂರ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಹಾಗೂ ಇತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande