
ನವದೆಹಲಿ, 03 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ದೇಶದಲ್ಲಿ ಡಿಜಿಟಲ್ ಸಂಪರ್ಕವನ್ನು ವಿಸ್ತರಿಸುವ ಸರ್ಕಾರದ ಕ್ರಮಗಳು ಫಲ ನೀಡುತ್ತಿದ್ದು, ಭಾರತದಲ್ಲಿ ಮೊಬೈಲ್ ನೆಟ್‌ವರ್ಕ್, ಬ್ರಾಡ್‌ಬ್ಯಾಂಡ್ ಚಂದಾದಾರಿಕೆ ಮತ್ತು ಡೇಟಾ ಬಳಕೆ ವೇಗವಾಗಿ ಏರಿಕೆ ಕಂಡಿದೆ. ಟೆಲಿಕಾಂ ವಲಯದ ಕಾರ್ಯವಿಧಾನ ಸರಳೀಕರಣ, ವಿದೇಶಿ ಹೂಡಿಕೆ ಸುಗಮಗೊಳಿಸುವಿಕೆ ಮತ್ತು ಗ್ರಾಮೀಣ ಪ್ರದೇಶಗಳಿಗೆ 4G ವಿಸ್ತರಣೆಯಂತಹ ನಿರ್ಧಾರಗಳು ಮೂಲಸೌಕರ್ಯವನ್ನು ಬಲಪಡಿಸಿವೆ.
ಈ ಕುರಿತು ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಸಂವಹನ ಮತ್ತು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಡಾ. ಪೆಮ್ಮಸಾನಿ ಚಂದ್ರಶೇಖರ್ ಅವರು, ಬ್ಯಾಂಕ್ ಗ್ಯಾರಂಟಿ–ಸ್ಪೆಕ್ಟ್ರಮ್ ಶುಲ್ಕ ಸರಳೀಕರಣ, ಶೇಕಡಾ 100ರಷ್ಟು ಎಫ್‌ಡಿಐ, ಗ್ರಾಹಕ ಡೇಟಾ ಡಿಜಿಟಲೀಕರಣ ಮತ್ತು ಟೆಲಿಕಾಂ ಟವರ್ ಅನುಮೋದನೆ ಸುಗಮಗೊಳಿಸುವ ಕೆಲಸಗಳಿಂದ ವಲಯದಲ್ಲಿ ಮಹತ್ವವಾದ ಬದಲಾವಣೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa