ಹನುಮ ಜಯಂತಿ ಶುಭಾಶಯ ಕೋರಿದ ಸಿದ್ದರಾಮಯ್ಯ
ಬೆಂಗಳೂರು, 03 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಹನುಮ ಜಯಂತಿಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿನ ಜನತೆಗೆ ಶುಭಾಶಯಗಳನ್ನು ತಿಳಿಸಿ, ಭಗವಾನ್ ಹನುಮನ ಆದರ್ಶಗಳನ್ನು ದೇಶ-ಸಮಾಜಕ್ಕೆ ಶ್ರೇಷ್ಠ ಮಾದರಿಯೆಂದು ಕೊಂಡಾಡಿದ್ದಾರೆ. ಹನುಮನ ಸ್ವಾಮಿನಿಷ್ಠೆ, ವಚನಪಾಲನೆ, ನಿಸ್ವಾರ್ಥ ಸೇವೆ
Cm


ಬೆಂಗಳೂರು, 03 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಹನುಮ ಜಯಂತಿಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿನ ಜನತೆಗೆ ಶುಭಾಶಯಗಳನ್ನು ತಿಳಿಸಿ, ಭಗವಾನ್ ಹನುಮನ ಆದರ್ಶಗಳನ್ನು ದೇಶ-ಸಮಾಜಕ್ಕೆ ಶ್ರೇಷ್ಠ ಮಾದರಿಯೆಂದು ಕೊಂಡಾಡಿದ್ದಾರೆ.

ಹನುಮನ ಸ್ವಾಮಿನಿಷ್ಠೆ, ವಚನಪಾಲನೆ, ನಿಸ್ವಾರ್ಥ ಸೇವೆ ಮತ್ತು ಅಚಲ ಭಕ್ತಿಯ ಮೂಲಕ ಸಾಮಾನ್ಯನೊಬ್ಬ ದೈವತ್ವಕ್ಕೇರುವ ಉದಾಹರಣೆ ಅವರ ಜೀವನವಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.

ಹನುಮ ಜಯಂತಿಯು ಶಾಂತಿ ಮತ್ತು ಸೌಹಾರ್ದತೆಯನ್ನು ಬಲಪಡಿಸಲಿ ಎಂದು ಹಾರೈಸಿ, ನಾಡಬಾಂಧವರಿಗೆ ಹನುಮ ಜಯಂತಿಯ ಹೃತ್ಪೂರ್ವಕ ಶುಭಾಶಯಗಳು ಎಂದು ಸಿದ್ದರಾಮಯ್ಯ ಅವರು ಸಂದೇಶದಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande