
ಗದಗ, 03 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಹಸಿದು ಬಂದವರಿಗೆ ಬರಿ 5 ರೂ.ಗಳಲ್ಲಿ ಹೊಟ್ಟೆ ತುಂಬಾ ಊಟ ನೀಡುತ್ತಿರುವುದು ಪುಣ್ಯದ ಕೆಲಸವಾಗಿದೆ ಈ ಸೇವೆ ನಿರಂತರವಾಗಿ ಸಾಗಲಿ ಎಂದು ನಗರದ ಖ್ಯಾತ ವೈದ್ಯ ಡಾ. ಪ್ಯಾರಾಲಿ ನೂರಾನಿ ಅವರು ಹೇಳಿದರು.
ಗದಗ ನಗರದ ಮಹಾತ್ಮಾಗಾಂಧಿ ವೃತ್ತದ ಹತ್ತಿರದ ಹಳೇ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಶ್ರೀರಾಮಕೃಷ್ಣ ಸೇವಾ ಪ್ರತಿಷ್ಠಾನದಿಂದ ಶ್ರೀ ಅನ್ನಪೂರ್ಣೇಶ್ವರಿ ಪ್ರಸಾದ ನಿಲಯದಲ್ಲಿ 1728 ನೇ ದಿನದ ಅನ್ನಪ್ರಸಾದ ಸೇವೆಯನ್ನು ಡಾ. ಪ್ಯಾರಾಲಿ ನೂರಾನಿರವರ 72 ನೇ ವರ್ಷದ ಜನ್ಮದಿನದ ಅಂಗವಾಗಿ ಅವರ ಕುಟುಂಬದವರು ಹಮ್ಮಿಕೊಂಡಿದ್ದ ಸೇವಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಶ್ರೀರಾಮಕೃಷ್ಣ ಸೇವಾ ಪ್ರತಿಷ್ಠಾನದಿಂದ ಡಾ. ಪ್ಯಾರಾಲಿ ನೂರಾನಿ ದಂಪತಿಗಳನ್ನು ಹಾಗೂ ದೆಹಲಿಯಿಂದ ಆಗಮಿಸಿದ್ದ ಡಾ. ಕಾಮತ್ ದಂಪತಿಗಳನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷ ಎಸ್.ಎಸ್.ಕಳಸಾಪೂರ, ಉಪಾಧ್ಯಕ್ಷರಾದ ಉಮೇಶ ಪೂಜಾರ, ಹಿರಿಯರಾದ ಗುರುಮೂರ್ತಿ ಮರೆಗುದ್ದಿ, ನಿರ್ದೇಶಕರಾದ ರಾಜಣ್ಣ ಮಲ್ಲಾಡದ, ಮುತ್ತು ಜಡಿ, ಸಾಮಾಜಿಕ ಕಾರ್ಯಕರ್ತರಾದ ಹೀರಾಲಾಲ ಸಿಂಗ್ರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಖಜಾಂಚಿಗಳಾದ ವೆಂಕಟೇಶ ಇಮರಾಪೂರ ಅವರು ಕಾರ್ಯಕ್ರಮ ನಿರೂಪಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP