ಅಂತಾರಾಷ್ಟ್ರೀಯ ಪ್ಯಾರಾ ಸಿಟಿಂಗ್ ಥ್ರೋಬಾಲ್‌ಗೆ ಆಯ್ಕೆಯಾದ ಜಿಲ್ಲೆಯ ಕ್ರೀಡಾಪಟುಗಳಿಗೆ ಸನ್ಮಾನ
ಗದಗ, 03 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಡಿಸೆಂಬರ 8 ರಿಂದ 10 ರವರೆಗೆ ಶ್ರೀಲಂಕಾದ ರತ್ನಾಪೂರದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಪ್ಯಾರಾಸಿಟಿಂಗ್ ಥ್ರೋಬಾಲ್ ಚಾಂಪಿಯನ್ ಶಿಪ್ಗೆ ಭಾರತದ ಪ್ರತಿನಿಧಿಗಳಾಗಿ ಗದಗ ಜಿಲ್ಲೆಯ ಮೂವರು ಕ್ರೀಡಾಪಟುಗಳು ಆಯ್ಕೆಯಾಗಿದ್ದು ಅವರಿಗೆ ಜಿಲ್ಲಾಡಳಿತ ಭವನದಲ್ಲಿ ಶುಕ
ಫೋಟೋ


ಗದಗ, 03 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಡಿಸೆಂಬರ 8 ರಿಂದ 10 ರವರೆಗೆ ಶ್ರೀಲಂಕಾದ ರತ್ನಾಪೂರದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಪ್ಯಾರಾಸಿಟಿಂಗ್ ಥ್ರೋಬಾಲ್ ಚಾಂಪಿಯನ್ ಶಿಪ್ಗೆ ಭಾರತದ ಪ್ರತಿನಿಧಿಗಳಾಗಿ ಗದಗ ಜಿಲ್ಲೆಯ ಮೂವರು ಕ್ರೀಡಾಪಟುಗಳು ಆಯ್ಕೆಯಾಗಿದ್ದು ಅವರಿಗೆ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರು ಸನ್ಮಾನಿಸಿ ಶುಭ ಕೋರಿದರು.

ಜಿಲ್ಲೆಯ ಕ್ರೀಡಾಪಟುಗಳಾದ ಕು. ಮಾಲತಿ ಇನಾಮತಿ, ಬಿ.ಆನಂದ್, ಮಹಾಂತೇಶ ಗೋವಿಂದಪ್ಪ ಬಿ. ಅವರುಗಳು ಅಂತರಾಷ್ಟ್ರೀಯ ಪ್ಯಾರಾಸಿಟಿಂಗ್ ಥ್ರೋಬಾಲ್ ಕ್ರೀಡೆಗೆ ಗದಗ ಜಿಲ್ಲೆಯಿಂದ ಶ್ರೀಲಂಕಾಗೆ ತೆರಳಲಿದ್ದು ಅವರಿಗೆ ಜಿಲ್ಲೆಯಿಂದ ವಿಜಯಶಾಲಿಗಳಾಗಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರಭು ಬುರಬುರೆ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶರಣುಗೋಗೇರಿ, ವಾರ್ತಾಧಿಕಾರಿ ವಸಂತ ಮಡ್ಲೂರ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಗಂಗಾಧರ ಶಿರೋಳ, ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ ಸೇರಿದಂತೆ ಇತರರು ಹಾಜರಿದ್ದರು.

ಹಿನ್ನೆಲೆ : ಗದಗದಲ್ಲಿ 29/6/2025 ರಂದು ನಡೆದ ಕರ್ನಾಟಕ ಸಿಟ್ಟಿಂಗ್ ಥ್ರೋಬಾಲ್ ಚಾಂಪಿಯನ್‌ಲ್ಲಿ ಒಟ್ಟು 8 ಪುರುಷರು ಮತ್ತು 8 ಮಹಿಳೆಯರು ಭಾಗವಹಿಸಿದ್ದರು ಮತ್ತು ಗದಗ ತಂಡವು ಪ್ರಥಮ ಸ್ಥಾನ ಪಡೆಯಿತು. ಮತ್ತು ನಂತರ 4 (ಆನಂದ್, ಮಹಾಂತೇಶ್, ಸೋಮು, ಹುಸೇನ್) ಪುರುಷರ ತಂಡದಿಂದ ಮತ್ತು ಮಾಲತಿ ಇನಾಮತಿ ಮಹಿಳಾ ತಂಡದಿAದ ಅವರ ಪ್ರದರ್ಶನದ ಆಧಾರದ ಮೇಲೆ 4 ನೇ ರಾಷ್ಟ್ರೀಯ ಸಿಟ್ಟಿಂಗ್ ಥ್ರೋಬಾಲ್ ಚಾಂಪಿಯಶಿಪ್‌ಗೆ ಆಯ್ಕೆಯಾದರು. 4 ನೇ ರಾಷ್ಟಿçÃಯ ಸಿಟ್ಟಿಂಗ್ ಥ್ರೋಬಾಲ್ ಚಾಂಪಿಯನಿಶಿಪ್ ಗೆ ತಮಿಳುನಾಡು ಕೊಯಮತ್ತೂರಿನಲ್ಲಿ ಆಗಸ್ಟ್ 29 ರಿಂದ 31, 2025 ರವರೆಗೆ ನಡೆಯಿತು.

ಭಾರತದಿಂದ ಒಟ್ಟು 24 ತಂಡಗಳು ರಾಷ್ಟ್ರೀಯ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿದ್ದವು.

ಮಹಿಳಾ ತಂಡವು ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿತು ಮತ್ತು ಪ್ರದರ್ಶನದ ಆಧಾರದ ಮೇಲೆ ಗದಗದಿಂದ ಡಿಸೆಂಬರ್ 8 ರಿಂದ ಡಿಸೆಂಬರ್ 10 ರವರೆಗೆ ಶ್ರೀಲಂಕಾದ ರತ್ನಾಪುರದಲ್ಲಿ ನಡೆಯಲಿರುವ ಸೌಥ್ ಏಷಿಯನ್ ಪ್ಯಾರಾ ಸಿಟಿಂಗ್ ಥ್ರೋಬಾಲ್‌ಗೆ ಮಹಾಂತೇಶ್ ಗೋವಿಂದಪ್ಪ ಬಿ, ಆನಂದ್ ಬೇಂದ್ರೆ ಮತ್ತು ಮಾಲತಿ ಇನಾಮತಿ ಈ ಮೂವರು ಜನರು ಆಯ್ಕೆಯಾಗಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande