ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಕರೆ
ಗದಗ, 03 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಟಿ.ಇ.ಟಿ ಡಿಸೆಂಬರ್ 7 ರಂದು ಪಾರದರ್ಶಕವಾಗಿ ಹಾಗೂ ಅಚ್ಚುಕಟ್ಟಾಗಿ ನಡೆಸಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು. ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಟಿ.ಇ.ಟ
ಫೋಟೋ


ಗದಗ, 03 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಟಿ.ಇ.ಟಿ ಡಿಸೆಂಬರ್ 7 ರಂದು ಪಾರದರ್ಶಕವಾಗಿ ಹಾಗೂ ಅಚ್ಚುಕಟ್ಟಾಗಿ ನಡೆಸಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.

ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಟಿ.ಇ.ಟಿ. ಪರೀಕ್ಷೆ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರೀಕ್ಷೆಗಳಲ್ಲಿ ಯಾವುದೇ ಅಕ್ರಮ ಅವ್ಯವಹಾರಗಳು ನಡೆಯದಂತೆ ನೋಡಿಕೊಳ್ಳಬೇಕು. ಜಿಲ್ಲೆಯ ಗದಗ ಶಹರದ 27 ಪರೀಕ್ಷಾ ಕೇಂದ್ರಗಳಲ್ಲಿ ಟಿ.ಇ.ಟಿ. ಪರೀಕ್ಷೆಗಳು ನಡೆಯಲಿದ್ದು ಅಲ್ಲಿ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳು ಇರುವಂತೆ ನೋಡಿಕೊಳ್ಳಬೇಕು. ಪರೀಕ್ಷಾ ಅವಧಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಹಾಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಪರೀಕ್ಷಾ ಅವಧಿಯಲ್ಲಿ ಯಾವುದೇ ಲೋಪದೋಷಗಳಾಗದಂತೆ ಕ್ರಮ ವಹಿಸಬೇಕು. ಒಟ್ಟಾರೆಯಾಗಿ ಟಿ.ಇ.ಟಿ. ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ನಡೆಸಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್. ಮಾತನಾಡಿ ಪರೀಕ್ಷೆಯಲ್ಲಿ ಸಮಯ ಪರಿಪಾಲನೆ ಅತ್ಯವಶ್ಯಕವಾಗಿದ್ದು ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಗೋಡೆ ಗಡಿಯಾರಗಳು ಇರುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ತುರ್ತು ವೈದ್ಯಕೀಯ ಸೇವೆ ಅಗತ್ಯವಿದ್ದಲ್ಲಿ ಆರೋಗ್ಯ ಇಲಾಖೆಯವರು ಈ ಕುರಿತು ಕ್ರಮ ವಹಿಸಬೇಕು. ಮಾರ್ಗಾಧಿಕಾರಿಗಳು, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಸ್ಥಾನಿಕ ಜಾಗೃತ ದಳದ ಅಧಿಕಾರಿಗಳು ಸಮರ್ಪಕವಾಗಿ ತಮ್ಮ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್.ಬುರುಡಿ ಅವರು ಮಾತನಾಡಿ ಟಿ.ಇ.ಟಿ. ಪರೀಕ್ಷೆಗಳು ಡಿಸೆಂಬರ್ 7 ರಂದು ಗದಗ ಶಹರ ವಲಯದಲ್ಲಿ ಒಟ್ಟು 27 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿವೆ. ಪರೀಕ್ಷಾ ಕೇಂದ್ರಗಳಿಗೆ 12 ಮಾರ್ಗಗಳನ್ನು ರಚಿಸಲಾಗಿದೆ. ಪ್ರಥಮ ಅಧಿವೇಶನ ಪರೀಕ್ಷೆ ಬೆಳಿಗ್ಗೆ 9.30 ಗಂಟೆಯಿ0ದ ಮ. 12 ಗಂಟೆಯವರೆಗೆ, ದ್ವಿತೀಯ ಅಧಿವೇಶನ ಪರೀಕ್ಷೆ ಮಧ್ಯಾಹ್ನ 2 ಗಂಟೆಯಿಂದ ಮ 4.30 ಗಂಟೆಯವರೆಗೆ ಜರುಗಲಿವೆ. ಪ್ರಥಮ ಅಧಿವೇಶನ ಪರೀಕ್ಷೆ 2159 ಅಭ್ಯರ್ಥಿಗಳು ಹಾಗೂ ದ್ವಿತೀಯ ಅಧಿವೇಶನ ಪರೀಕ್ಷೆಯನ್ನು 6391 ಅಭ್ಯರ್ಥಿಗಳು ಒಟ್ಟಾರೆ ಟಿ.ಇ.ಟಿ. ಪರೀಕ್ಷೆಯನ್ನು 8550 ಅಭ್ಯರ್ಥಿಗಳು ಬರೆಯಲಿದ್ದಾರೆ. ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ಹಾಗೂ ಶಾಂತಿಯುತವಾಗಿ ಜರುಗಿಸಲು ಕ್ರಮ ವಹಿಸಲಾಗಿದೆ ಎಂದು ಸಭೆಗೆ ವಿವರಿಸಿದರು.

ಸಭೆಯಲ್ಲಿ ಸಿ.ಸಿ.ಕ್ಯಾಮರಾ ವ್ಯವಸ್ಥೆ , ವಾಕರಸಾಸಂಸ್ಥೆಯಿಂದ ಸಂಚಾರದ ಸೌಲಭ್ಯ ಕುರಿತು ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಪ್ರವಾಸೋದ್ಯಮ, ಖಜಾನೆ ಇಲಾಖೆ ಸೇರಿದಂತೆ ವಿವಿಧ ಮತ್ತು ಇತರರು ಹಾಜರಿದ್ದರು.

ಗದಗ ಶಹರ ವಲಯದಲ್ಲಿನ ಒಟ್ಟು 27 ಟಿ.ಇ.ಟಿ. ಪರೀಕ್ಷಾ ಕೇಂದ್ರದ ಹೆಸರುಗಳು:

ಗದಗನ ಸರ್ಕಾರಿ ಪದವಿ ಪೂರ್ವ ಕಾಲೇಜ್ ; ಮಹಾವೀರ ಜೈನ್ ಪ್ರೈಮರಿ, ಹೈಸ್ಕೂಲ್ ; ಬಸವೇಶ್ವರ ಹೈಸ್ಕೂಲ್ ; ಸಿಡಿಓ ಜೈನ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ; ಜೆಸಿ ಹೈಸ್ಕೂಲ್ ; ಜಿಡಿ ಶಹ ಲಾಯನ್ಸ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ; ಸನ್ಮಾರ್ಗ ಪ್ರಿಯುನಿವರ್ಸಿಟಿ ಸೈನ್ಸ್ ಮತ್ತು ಕಾಮರ್ಸ ಕಾಲೇಜ್ ; ಗುರುಬಸವ ಸಿಬಿಎಸ್‌ಇ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್; ತೋಂಟದಾರ್ಯ ಕಾಲೇಜ್ ಆಫ್ ಇಂಜನೀಯರಿಂಗ್ ; ಎಸ್.ಟಿ.ಎಸ್.ಕೆ.ಕೆ.ಪಾಲಿಟೆಕ್ನಿಕ್; ಕೆಎಲ್‌ಇ ಸೊಸೈಟಿ ಜೆ.ಟಿ.ಪಿ.ಯು.ಕಾಲೇಜ್; ಕೆ.ಎಲ್.ಇ. ಆರ್ಟ್ಸ ಮತ್ತು ಕಾಮರ್ಸ ಪಿಯು ಕಾಲೇಜ್; ಕೆಎಲ್‌ಇಸಿ.ಬಿ.ಎಸ್.ಇ; ಸೇಂಟ್ ಜಾನ್ ಹೈಸ್ಕೂಲ್ ಬೆಟಗೇರಿ-ಗದಗ; ಲೋಯಲಾ ಹೈಸ್ಕೂಲ್; ಎಎಸ್‌ಎಸ್ ಕಾಮರ್ಸ ಕಾಲೇಜ್ ಬೆಟಗೇರಿ; ಜಗದ್ಗುರು ತೋಂಟದಾರ್ಯ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್; ಜೆಟಿವಿಪಿ‘ಸ್ ಬಸವೇಶ್ವರ ಆರ್ಟ್ಸ ಕಾಮರ್ಸ ಮತ್ತು ಸೈನ್ಸ್ ಕಾಲೇಜ್;ಎಚ್.ಸಿ.ಇ.ಎಸ್.ಪಿ.ಯು ಕಾಲೇಜ್ ; ಬಿಪಿನ್ ಚಿಕ್ಕಟ್ಟಿ ಪಿಯು ಸೈನ್ಸ್ ಕಾಲೇಜ್; ಮೈಲಾರಪ್ಪ ಮೆಣಸಗಿ ಹೈಸ್ಕೂಲ್ ; ಬ್ರೆöÊಟ್ ಹಾರಿಜಾನ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ; ವಿಡಿಎಸ್ ಟಿ ಬಾಯ್ಸ್ ಹೈಸ್ಕೂಲ್ ; ವಿಡಿಎಸ್ ಶ್ರೀಮತಿ ಎಸ್.ಪಿ.ಹುಯಿಲಗೋಳ ಗರ್ಲ್ಸ ಹೈಸ್ಕೂಲ್ ; ಸಿ.ಎಸ್.ಪಾಟೀಲ ಬಾಯ್ಸ್ ಸ್ಕೂಲ್ ; ಸಿಎಸ್ ಪಾಟೀಲ ಗರ್ಲ್ಸ ಸ್ಕೂಲ್ , ಗರ‍್ನಮೆಂಟ್ ಫಸ್ಟ್ ಗ್ರೇಡ್ ಕಾಲೇಜ್ .

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande