ಡಿ.05 ರಂದು ಸಿರಿಧಾನ್ಯ ನಡಿಗೆ
ಹೊಸಪೇಟೆ, 03 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕೃಷಿ ಇಲಾಖೆಯ ವತಿಯಿಂದ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಆಚರಣೆಯ ಪ್ರಯುಕ್ತ ಡಿಸೆಂಬರ್.05 ರಂದು ಬೆಳಿಗ್ಗೆ 6:30 ಕ್ಕೆ ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಸಿರಿಧಾನ್ಯ ನಡಿಗೆಯನ್ನು ಆಯೋಜಿಸಲಾಗಿದೆ. ಸಿರಿಧಾನ್ಯ ನಡಿಗೆಯು ಕನಕದಾಸರ ವೃತ್ತದಿಂದ ಆ
ಡಿ.05 ರಂದು ಸಿರಿಧಾನ್ಯ ನಡಿಗೆ


ಹೊಸಪೇಟೆ, 03 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕೃಷಿ ಇಲಾಖೆಯ ವತಿಯಿಂದ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಆಚರಣೆಯ ಪ್ರಯುಕ್ತ ಡಿಸೆಂಬರ್.05 ರಂದು ಬೆಳಿಗ್ಗೆ 6:30 ಕ್ಕೆ ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಸಿರಿಧಾನ್ಯ ನಡಿಗೆಯನ್ನು ಆಯೋಜಿಸಲಾಗಿದೆ.

ಸಿರಿಧಾನ್ಯ ನಡಿಗೆಯು ಕನಕದಾಸರ ವೃತ್ತದಿಂದ ಆರಂಭವಾಗಿ ಡಾ.ಪುನೀತ್ ರಾಜಕುಮಾರ್ ವೃತ್ತ, ಅಂಬೇಡ್ಕರ್ ವೃತ್ತ, ವಿಜಯನಗರ ಕಾಲೇಜು ಮಾರ್ಗವಾಗಿ ಜಿಲ್ಲಾ ಒಳಕ್ರೀಡಾಂಗಣದ ವರಗೆ ನಡೆಯಲಿದ್ದು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಿ.ಟಿ.ಮಂಜುನಾಥ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande