


ಬಳ್ಳಾರಿ, 03 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಅರಣ್ಯ ಇಲಾಖೆಯ ಹುತಾತ್ಮರ ದಿನಾಚರಣೆಯ ಅಂಗವಾಗಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಜಿಲ್ಲಾ ಘಠಕ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಳ್ಳಾರಿ ಶಾಖೆ ಮತ್ತು ಬಿಮ್ಸ್ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ `ಮೆಗಾ ಉಚಿತ ಆರೋಗ್ಯ ತಪಾಸಣಾ ಶಿಬಿರ’ ನಡೆಯಿತು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳಾದ ಅಲೋಕ್‍ಚಂದ್ರ, ಮಿಶ್ರಾ, ಮಧೂಶೇಖರ್ ಅವರು ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು.
ಮೂಳೆ ರೋಗ ತಜ್ಞರು, ಪ್ರಸೂತಿ ರೋಗ ತಜ್ಞರು, ಕಿವಿ ಮೂಗು ಮತ್ತು ಗಂಟಲು ರೋಗ ತಜ್ಞರು ಮತ್ತು ವೈದ್ಯ ಶಾಸ್ತ್ರ ತಜ್ಞರು 200 ಕ್ಕಿಂತ ಜನರ ಆರೋಗ್ಯ ತಪಾಸಣೇ ನಡೆಸಿ, ಸೂಕ್ತ ಚಿಕಿತ್ಸೆಯನ್ನು ನೀಡಿದರು.
ರೆಡ್‍ಕ್ರಾಸ್‍ನ ಡಾ. ಎಸ್.ಜೆ.ವಿ. ಮಹಿಪಾಲ್, ಎಂ.ಎ. ಷಕೀಬ್, ಶಿವಸಾಗರ್, ಶಮೀಮ್ ಜಕಲಿ, ಪಿ. ವಾಸು, ಮಹಬೂಬ್ ಬಾಷಾ ಮತ್ತು ಎಂ. ವಲಿಬಾಷಾ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್