
ನವದೆಹಲಿ, 03 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ದೆಹಲಿ–ಎನ್‌ಸಿಆರ್ ಪ್ರದೇಶದಲ್ಲಿ ವಾಯು ಮಾಲಿನ್ಯ ಮತ್ತೆ ಗಂಭೀರ ಸ್ವರೂಪ ಪಡೆದಿದ್ದು, ಬುಧವಾರ ಸಂಜೆ ಒಟ್ಟು ವಾಯು ಗುಣಮಟ್ಟ ಸೂಚ್ಯಂಕ 342ಕ್ಕೆ ತಲುಪಿದೆ. ಇದು ತುಂಬಾ ಕಳಪೆ ವರ್ಗಕ್ಕೆ ಸೇರಿದ್ದು ಆರೋಗ್ಯದ ಮೇಲೆ ಬಾರಿ ಪರಿಣಾಮ ಬೀರುವ ಸಾಧ್ಯತೆ ಇದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ದಕ್ಷಿಣ ದೆಹಲಿಯ ನೆಹರು ನಗರದಲ್ಲಿ AQI 436 ದಾಖಲಾಗಿದ್ದು, ಜಹಾಂಗೀರ್‌ಪುರಿ, ಬವಾನಾ, ರೋಹಿಣಿ, ವಜೀರ್‌ಪುರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೂಚ್ಯಂಕ 400 ದಾಟಿದೆ. ಆನಂದ್ ವಿಹಾರ್ ಮತ್ತು ಪಂಜಾಬಿ ಬಾಗ್‌ಗಳಲ್ಲಿ ಕೂಡಾ ‘ತೀವ್ರ’ ವರ್ಗದ ಮಾಲಿನ್ಯ ಕಂಡು ಬಂದಿದೆ.
ಎನ್‌ಸಿಆರ್‌ನ ಗಾಜಿಯಾಬಾದ್, ಗ್ರೇಟರ್ ನೋಯ್ಡಾ, ಹಾಪುರ್ ಮತ್ತು ಚರ್ಕಿ ದಾದ್ರಿ ಪ್ರದೇಶಗಳಲ್ಲೂ ಗಾಳಿ ಗುಣಮಟ್ಟ ಕಳಪೆಯ ಸ್ಥಿತಿಯಲ್ಲೇ ಮುಂದುವರಿದಿದೆ. ತಾಪಮಾನ ಕುಸಿತ, ಕಡಿಮೆ ಗಾಳಿಯ ವೇಗ ಮತ್ತು ಮೋಡ ಕವಿದ ವಾತಾವರಣವು ಮಾಲಿನ್ಯ ಹೆಚ್ಚಲು ಕಾರಣವಾಗಿದೆ.
ಹವಾಮಾನ ಇಲಾಖೆ ಮುಂದಿನ ಮೂರು ದಿನ ಹಗುರ ಮಂಜು ಹಾಗೂ ಭಾಗಶಃ ಮೋಡ ಕವಿದ ವಾತಾವರಣ ಮುಂದುವರಾಯಲಿದೆ ಎಂದು ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa