
ನವದೆಹಲಿ, 28 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ಗೀತಾಂಜಲಿ ಸಾಂಸ್ಕೃತಿಕ ಕೇಂದ್ರವು ಇಂದು ಕೇವಲ ತರಗತಿ ಕೊಠಡಿಯಾಗಿರದೆ, ಸಂಪೂರ್ಣ ಕ್ಯಾಂಪಸ್‌ನ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿ ರೂಪುಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾಸಿಕ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದರು.
ಇಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಜಾನಪದ ಹಾಗೂ ಶಾಸ್ತ್ರೀಯ ಪರಂಪರೆಗಳ ಸಂಗಮ ನಡೆಯುತ್ತಿದ್ದು, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಲ್ಲಿ ಸಾಂಸ್ಕೃತಿಕ ಪ್ರಜ್ಞೆ ಬೆಳೆಸಲು ಇದು ವೇದಿಕೆಯಾಗುತ್ತಿದೆ ಎಂದರು.
ವಿದೇಶದಲ್ಲೂ ಭಾಷಾ ಸಂರಕ್ಷಣೆ
ದುಬೈನಲ್ಲಿ ವಾಸಿಸುವ ಕನ್ನಡ ಕುಟುಂಬಗಳು ಆರಂಭಿಸಿರುವ ಕನ್ನಡ ಪಾಠಶಾಲೆಯನ್ನು ಪ್ರಧಾನಿ ವಿಶೇಷವಾಗಿ ಪ್ರಸ್ತಾಪಿಸಿದರು. ಮಕ್ಕಳು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರಿಯುವ ಜೊತೆಗೆ ತಮ್ಮ ಮಾತೃಭಾಷೆಯಿಂದ ದೂರವಾಗಬಾರದು ಎಂಬ ಸಂಕಲ್ಪದಿಂದ ಈ ಪಾಠಶಾಲೆ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು. ವಿದೇಶದಲ್ಲಿರುವ ಭಾರತೀಯರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಲು ಕೈಗೊಂಡಿರುವ ಈ ಪ್ರಯತ್ನವು ಸ್ಪೂರ್ತಿದಾಯಕ ಮಾದರಿಯಾಗಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.
2025ರಲ್ಲಿ ದೇಶ ಸಾಧಿಸಿರುವ ಯಶಸ್ಸುಗಳು ಭಾರತದ ಸಾಮೂಹಿಕ ಶಕ್ತಿಗೆ ಸಾಕ್ಷಿಯಾಗಿದ್ದು, 2026ನೇ ವರ್ಷ ಹೊಸ ಗುರಿಗಳು, ದೃಢ ಸಂಕಲ್ಪ ಮತ್ತು ಆತ್ಮವಿಶ್ವಾಸದೊಂದಿಗೆ ಮುಂದುವರಿಯುವ ವರ್ಷವಾಗಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa