ಪೊಲೀಸ ಜೊತೆಗೆ ಗೃಹಿಣಿ ಪ್ರಣಯ ಫೋಟೋ ವೈರಲ್
ವಿಜಯಪುರ, 28 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಪೊಲೀಸ್ ಠಾಣೆಗೆ ದೂರು ನೀಡಲು ಬಂದ ಮಹಿಳೆಯನ್ನೇ‌ ಪೊಲೀಸ್ ಅಧಿಕಾರಿ ಬಲೆಗೆ ಹಾಕಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸಪ್ಪನೊಂದಿಗೆ ಮಹಿಳೆಯ ಪ್ರಣಯ ಫೋಟೋಗಳು ವೈರಲ್ ಆಗಿವೆ. ದೂರು ನೀಡಲು ಹೋಗಿದ್ದ ಮಹಿಳೆಯನ್ನೇ ಪೊಲೀಸ್ ಅಧಿಕ
ಪೊಲೀಸ್


ವಿಜಯಪುರ, 28 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಪೊಲೀಸ್ ಠಾಣೆಗೆ ದೂರು ನೀಡಲು ಬಂದ ಮಹಿಳೆಯನ್ನೇ‌ ಪೊಲೀಸ್ ಅಧಿಕಾರಿ ಬಲೆಗೆ ಹಾಕಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ಪೊಲೀಸಪ್ಪನೊಂದಿಗೆ ಮಹಿಳೆಯ ಪ್ರಣಯ ಫೋಟೋಗಳು ವೈರಲ್ ಆಗಿವೆ.

ದೂರು ನೀಡಲು ಹೋಗಿದ್ದ ಮಹಿಳೆಯನ್ನೇ ಪೊಲೀಸ್ ಅಧಿಕಾರಿ ತನ್ನ ಬಲೆಗೆ ಬೀಳಿಸಿಕೊಂಡು ಆಕೆಯ ಗಂಡನ ಕುಟುಂಬಕ್ಕೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ.

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಭೀಮಾಶಂಕರ್ ಹೋಳ್ಕರ್ ಪತ್ನಿ ಅನುರಾಧಾ ಪೊಲೀಸ್ ಅಧಿಕಾರಿಯ ಬಲೆಗೆ ಬಿದ್ದಿರುವ ಗೃಹಿಣಿ.

ಕಳೆದ 10 ವರ್ಷಗಳ ಹಿಂದೆ ಭೀಮಾಶಂಕರ ಮದುವೆಯಾದ ಅನುರಾಧಾಗೆ ಓರ್ವ ಮಗನಿದ್ದಾನೆ. ಆಲಮೇಲ ಪಟ್ಟಣದಲ್ಲಿ ಸಂಸಾರ ನಡೆಸುತ್ತಿದ್ದ ಅನುರಾಧಾ ಹಾಗೂ ಭೀಮಾಶಂಕರ ನಡುವೆ ಐದು ವರ್ಷಗಳ ಹಿಂದೆ ಕೌಟುಂಬಿಕ ಕಲಹ ಉಂಟಾಗುತ್ತದೆ‌.

ಆ ವೇಳೆ ಆಲಮೇಲ ಠಾಣೆಯಲ್ಲಿ ಎಎಸ್ಐ ಆಗಿದ್ದ ಮನೋಹರ್ ಕಂಚಗಾರ ಅವರಿಗೆ ದೂರು ನೀಡುತ್ತಾರೆ. ಪ್ರಕರಣ ಸಂಬಂಧ ವಿಚಾರಣೆಗೆ ಬರುತ್ತಿದ್ದ ವೇಳೆ ಪರಿಚಯವಾಗಿ ಬಳಿಕ ಪ್ರೀತಿ, ಪ್ರೇಮಕ್ಕೆ ತಿರುಗಿದೆ.

ಬಳಿಕ ಇಬ್ಬರು ಸೇರಿ ಗಂಡನ ಮನೆಯವರಿಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ ಎಂದು ಪತಿ ಭೀಮಾಶಂಕರ ಆರೋಪಿಸಿದ್ದಾರೆ

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande