ರಾಯಚೂರು ಸರ್ಕಾರಿ ನೌಕರರ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆ : ಡಿಸೆಂಬರ್ 31 ಕೊನೆಯ ದಿನ
ರಾಯಚೂರು, 28 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರಾಯಚೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಜಿಲ್ಲಾ ಸರಕಾರಿ ನೌಕರರ ಸಂಘ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ರಾಯಚೂರು ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್
ರಾಯಚೂರು ಸರ್ಕಾರಿ ನೌಕರರ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆ : ಡಿಸೆಂಬರ್ 31 ಕೊನೆಯ ದಿನ


ರಾಯಚೂರು, 28 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಾಯಚೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಜಿಲ್ಲಾ ಸರಕಾರಿ ನೌಕರರ ಸಂಘ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ರಾಯಚೂರು ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಸಂಘಟನೆಯನ್ನು ಜನವರಿ 8 ಹಾಗೂ 9ರ ಬೆಳಿಗ್ಗೆ 10 ಗಂಟೆಗೆ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದ ಹೊರಾಂಗಣ ಹಾಗೂ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದು, ಸ್ಪರ್ಧಾಳುಗಳು ಡಿಸೆಂಬರ್ 31ರೊಳಗಾಗಿ ನೋಂದಾಯಿಸಿಕೊಳ್ಳಬಹುದಾಗಿದೆ.

ಆನ್‌ಲೈನ್ ಲಿಂಕ್ : https://form.svhrt.com/6931869b0a0bd8c6f89eda9f ಮೂಲಕ ಜಿಲ್ಲೆಯ ಸರ್ಕಾರಿ ನೌಕರ ಸ್ಪರ್ಧಾಳುಗಳು ನೋಂದಣೆ ಮಾಡಿಕೊಂಡು ಕ್ರೀಡಾಕೂಟದಲ್ಲಿ ಭಾಗವಹಿಸಬಹುದು. ಆಫ್‌ಲೈನ್ ನೋಂದಣೆಗೆ ಅವಕಾಶವಿರುವುದಿಲ್ಲ.

ಕ್ರೀಡಾ ತರಬೇತುದಾರರು, ಆರು ತಿಂಗಳೊಳಗಾಗಿ ನೇಮಕಗೊಂಡವರು, ತಾತ್ಕಾಲಿಕವಾಗಿ ನೇಮಕಗೊಂಡವರು, ಪ್ಯಾರಾ ಮಿಲಟರಿ, ಪೊಲೀಸ್, ಸಿ.ಆರ್.ಪಿ.ಎಫ್, ಅಗ್ನಿಶಾಮಕ ದಳ ಮೊದಲಾದ ಸಮವಸ್ತಧಾರಿತ ಸಿಬ್ಬಂದಿ ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.

ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಇಚ್ಚಿಸುವ ಎಲ್ಲಾ ಕಾಯಂ ಸರ್ಕಾರಿ ನೌಕರರು ತಾವು ಕೆಲಸ ಮಾಡುವ ಕಚೇರಿ ಮುಖ್ಯಸ್ಥರ ಸಹಿ ಇರುವ ಗುರುತು ಪತ್ರವನ್ನು (ಭಾವಚಿತ್ರ ಸಹಿತ) ಕಡ್ಡಾಯವಾಗಿ ಕ್ರೀಡಾಕೂಟದ ಸಮಯದಲ್ಲಿ ಹಾಜರುಪಡಿಸುವುದು.

ಒಬ್ಬ ನೌಕರ ಕ್ರೀಡಾಪಟು 01 ಫೀಲ್ಡ್ ಮತ್ತು 02 ಟ್ರ‍್ಯಾಕ್ ಅಥವಾ 01 ಟ್ರ‍್ಯಾಕ್ ಮತ್ತು 02 ಫೀಲ್ಡ್ ಸೇರಿ ಒಟ್ಟು 03 ಆಟಗಳಲ್ಲಿ ಮಾತ್ರ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಯಚೂರು ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande