
ಬೆಂಗಳೂರು, 28 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಭಾರತೀಯ ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯಲ್ಲಿ ನಿಂತು, ಇಡೀ ಹೋರಾಟಕ್ಕೆ ಸಮಷ್ಟಿಯ ರೂಪ ನೀಡಿದ ಕಾಂಗ್ರೆಸ್ ಪಕ್ಷ ಸ್ಥಾಪನೆಯಾದ ಐತಿಹಾಸಿಕ ದಿನವಿದು. ದೇಶಕ್ಕೂ ದೇಶವಾಸಿಗಳಿಗೆ ಅಪಾಯ ಎದುರಾದ ಪ್ರತಿಸಾರಿ ಹೋರಾಟಕ್ಕೆ ಮುಂದಾಗಿ, ತ್ಯಾಗ–ಬಲಿದಾನಗಳ ನಿಸ್ವಾರ್ಥ ಪರಂಪರೆಯನ್ನು ರೂಪಿಸಿಕೊಂಡಿರುವುದು ಕಾಂಗ್ರೆಸ್ ಪಕ್ಷದ ವಿಶಿಷ್ಟತೆ.
ಕಾಂಗ್ರೆಸ್ ಕೇವಲ ಒಂದು ರಾಜಕೀಯ ಪಕ್ಷವಾಗಿರದೆ, ಜನಪರ ಚಳವಳಿಯಾಗಿ ಬೆಳೆದು, ಕೋಟ್ಯಂತರ ಭಾರತೀಯರ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಂವಿಧಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯ ವ್ಯವಸ್ಥೆಯನ್ನು ನೀಡಿರುವುದೂ ಕಾಂಗ್ರೆಸ್ ಪಕ್ಷವೇ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.
ಜಾತ್ಯತೀತ, ಪ್ರಗತಿಪರ ಭಾರತ ನಿರ್ಮಾಣದ ಮಹಾ ಚಳವಳಿಯಾದ ಕಾಂಗ್ರೆಸ್‌ನ ಭಾಗವಾಗಿ ಶ್ರಮಿಸಿದ ಹಾಗೂ ಇಂದಿಗೂ ಶ್ರಮಿಸುತ್ತಿರುವ ನನ್ನ ಎಲ್ಲಾ ಸೈದ್ಧಾಂತಿಕ ಸಂಗಾತಿಗಳಿಗೆ ಕಾಂಗ್ರೆಸ್ ಸಂಸ್ಥಾಪನಾ ದಿನದ ಹಾರ್ದಿಕ ಶುಭಾಶಯಗಳನ್ನು ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa