ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಹೇರಲು ಹೊರಟಿರುವ ಕಾಂಗ್ರೆಸ್ ಸರ್ಕಾರ : ಎಂ.ಎಂ.ಹಿರೇಮಠ
ಗದಗ, 24 ಡಿಸೆಂಬರ್ (ಹಿ.ಸ.) ಆ್ಯಂಕರ್: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷಗಳನ್ನು ಹಣಿಯಲು ದ್ವೇಷ ಭಾಷಣ ಮಸೂದೆಯನ್ನು ಮಂಡಿಸಿ ರಾಜ್ಯದಲ್ಲಿ ವಿರೋಧ ಪಕ್ಷಗಳ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಲು ಹೊರಟ ಮಸೂದೆ ಇದಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಎಂ.ಎಂ.ಹಿರೇಮಠರವರ
ಫೋಟೋ


ಗದಗ, 24 ಡಿಸೆಂಬರ್ (ಹಿ.ಸ.)

ಆ್ಯಂಕರ್:

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷಗಳನ್ನು ಹಣಿಯಲು ದ್ವೇಷ ಭಾಷಣ ಮಸೂದೆಯನ್ನು ಮಂಡಿಸಿ ರಾಜ್ಯದಲ್ಲಿ ವಿರೋಧ ಪಕ್ಷಗಳ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಲು ಹೊರಟ ಮಸೂದೆ ಇದಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಎಂ.ಎಂ.ಹಿರೇಮಠರವರು ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಅವರಿಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ದ್ವೇಷ ಭಾಷಣ ವಿಧೇಯಕವನ್ನು 2 ಸದನದಲ್ಲಿ ಪಾಸ್ ಮಾಡಿಕೊಂಡು ಇದೊಂದು ಅಸ್ಪಸ್ಟ ಕಾನೂನಾಗಿದೆ. ಪೋಲಿಸ್ ವ್ಯವಸ್ಥೆಯ ದುರಪಯೋಗಕ್ಕೆ ದಾರಿ ಮಾಡಿಕೊಡಲಿದ್ದು ಈ ವಿಧೇಯಕವು ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರಗಳನ್ನು ನೀಡುತ್ತಿದೆ. ಒಂದು ಟ್ವೀಟ್, ಒಂದು ಕಾರ್ಟೂನ್ ಅಥವಾ ಒಂದು ಲೇಖನವು ದ್ವೇಷದ ಪ್ರಚೋದನೆ ಎಂದು ನಿರ್ಧರಿಸುವ ಅಧಿಕಾರ ಒಬ್ಬ ಕೆಳ ಹಂತದ ಪೋಲಿಸ್ ಅಧಿಕಾರಿಯ ಕೈಯಲ್ಲಿರುತ್ತದೆ. ಡಾ|| ಬಿ.ಆರ್.ಅಂಬೇಡ್ಕರವರು ನೀಡಿರುವ ಭಾರತದ ಸಂವಿಧಾನದಲ್ಲಿ ಪ್ರತೀಯೊಬ್ಬ ವ್ಯಕ್ತಿಗೂ ಕೂಡ ಸಂವಿಧಾನದತ್ತವಾಗಿ ಮಾತನಾಡುವ ಅಧಿಕಾರವಿರುತ್ತದೆ. ಆದರೆ ಕಾಂಗ್ರೆಸ್ ನಾಯಕ ರಾಹುಲ ಗಾಂಧಿಯವರು ಹೋದಲ್ಲಿ, ಬಂದಲ್ಲಿ ಸಂವಿಧಾನದ ಪುಸ್ತಕವನ್ನು ಹಿಡಿದುಕೊಂಡು ಸಂವಿಧಾನದ ರಕ್ಷಕನಂತೆ ತೊರ್ಪಡಿಸುವರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಿರೋಧ ಪಕ್ಷದವರನ್ನು ಮಟ್ಟ ಹಾಕಬೇಕೆಂದು ಹಾಗು ಒಂದು ನಿರ್ಧಿಷ್ಟ ಕೋಮಿನವರನ್ನು ತೃಪ್ತಿಪಡಿಸಲು ಈ ಕಾನೂನನ್ನು ಜಾರಿಗೆ ತರಲು ಹೊರಟಿದ್ದು ನಾಚಿಕೆಗೇಡಿನ ಕ್ರಮ. ಈಗಾಗಲೇ ಸಾಕಷ್ಟು ಕಾನೂನುಗಳು ದ್ವೇಷ ಭಾಷಣ ನಿಯಂತ್ರಿಸಲು ಈಗಾಗಲೇ ಸಾಕಷ್ಟು ಕಾನೂನುಗಳು ಇದ್ದು ಭಾರತೀಯ ನ್ಯಾಯ ಸಂಹಿತೆ ಸೇಕ್ಷನ್ 153 ಎ, 295 ಎ ಮತ್ತು 505 ಅಡಿಯಲ್ಲಿ ಧರ್ಮ, ಜಾತಿ ಅಥವಾ ಸಮುದಾಯಗಳ ನಡುವೆ ದ್ವೇಷ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಾಕಷ್ಟು ಅವಕಾಶಗಳು ಇದ್ದರು ಇವುಗಳ ಜೊತೆಗೆ ಆಯ್.ಟಿ.ಕಾಯ್ದೆಯು ಡಿಜಿಟಲ್ ಮಾಧ್ಯಮದಲ್ಲಿನ ದ್ವೇಷ ಭಾಷಣವನ್ನು ಕೂಡಾ ನಿಯಂತ್ರಿಸುತ್ತಿದೆ. ಇಷ್ಟೊಂದು ಬಲಿಷ್ಠವಾದ ಕಾನೂನುಗಳು ಇದ್ದಾಗಲೂ ಕೂಡಾ ಕಾಂಗ್ರೇಸ್ ಸರ್ಕಾರ ಈ ಹೊಸ ಮತ್ತು ಹೆಚ್ಚು ಕಠಿಣವಾದ ವಿಧೇಯಕದ ಅವಶ್ಯಕತೆ ಏನು? ಎಂಬ ಪ್ರಶ್ನೆ ಮೂಡುತ್ತದೆ.

ಇರುವ ಕಾನೂನುಗಳನ್ನು ಸರಿಯಾಗಿ ಹಾಗು ಪರಿಣಾಮಕಾರಿಯಾಗಿ ಬಳಸುವ ಬದಲು ಹೊಸ ಮತ್ತು ಅಸ್ಪಷ್ಟ ಕಾನೂನುನ್ನು ತರುವುದು ರಾಜ್ಯದ ನಾಗರಿಕರ ಖಾಸಗಿ ಸಂವಹನದ ಮೇಲೆ ಹೇರಲು ಬಯಸುತ್ತಿದೆ. ಸರ್ಕಾರದ ವೈಫಲ್ಯಗಳನ್ನು ಏತ್ತಿ ತೋರಿಸುವದು ವಿರೋಧ ಪಕ್ಷಗಳ ಹಾಗು ಸಂಘಟನೆಗಳ ಕರ್ತವ್ಯ. ಪ್ರತಿಭಟನೆಗಳ ಸಮಯದಲ್ಲಿ ಕೆಲವೊಂದು ಆಕ್ರೋಶದ ಮಾತುಗಳು ಬರುವದು ಸಾಮಾನ್ಯ. ಇಂತಹ ಸಮಯವನ್ನು ರಾಜ್ಯ ಸರ್ಕಾರ ಬಲವಾಗಿ ಹತ್ತಿಕ್ಕಲು ಪ್ರಯತ್ನ ಮಾಡುತ್ತಿದೆ. ಸರ್ಕಾರದ ನೀತಿಗಳನ್ನು ಟೀಕಿಸುವ ಧ್ವನಿಗಳು ಅಡಗಿದರೆ ಸರ್ವಾಧಿಕಾರದ ಹಾದಿಯಾಗುತ್ತಿದೆ. ಈ ಜನವಿರೋಧಿ ಮಸೂದಿಗೆ ರಾಜ್ಯಪಾಲರು ಸಹಿ ಮಾಡಬಾರದೆಂದು ಅವರಲ್ಲಿ ವಿನಂತಿಸಿಕೊಳ್ಳುತ್ತೇನೆ.

ಈ ಕೂಡಲೇ ಈ ವಿಧೇಯಕವನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದುಕೊಳ್ಳಬೇಕೆಂದು ಜಿಲ್ಲಾ ಬಿಜೆಪಿ ವಕ್ತಾರರಾದ ಎಂ.ಎಂ.ಹಿರೇಮಠರವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande