
ವಿಜಯಪುರ, 25 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್ ನಿಂದ ಕಬ್ಬು ಹಾಗೂ ಟ್ರೈಲರ್ ಬೆಂಕಿಗಾಹುತಿ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ರತ್ನಾಪುರ ಗ್ರಾಮದಲ್ಲಿ ನಡೆದಿದೆ.
ರತ್ನಾಪುರ ರೈತ ಭೀಮು ಕೆಂಬಾವಿ ಎಂಬುವರಿಗೆ ಸೇರಿದ 5 ಏಕರೆ ಕಬ್ಬು ಹಾಗೂ ಕಬ್ಬು ತುಂಬಿದ ಟ್ರೈಲರ್ ಬೆಂಕಿಗಾಹುತಿ ಆಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಹಾಗೂ ಟ್ರಾಕ್ಟರ್ ಟ್ರೈಲರ್ ಹೊತ್ತಿ ಉರಿದಿದೆ.
ಮೊದಲು ಕಬ್ಬು ತುಂಬಿದ ಟ್ರೈಲರ್‌ಗೆ ಬೆಂಕಿ ತಗುಲಿದೆ. ಬಳಿಕ 5 ಏಕರೆ ಪ್ರದೇಶದಲ್ಲಿದ್ದ ಕಬ್ಬಿನ ಬೆಳೆಗಳು ಬೆಂಕಿಗಾಹುತಿ ಆಗಿ ಲಕ್ಷಾಂತರ ಮೌಲ್ಯದ ಕಬ್ಬು ನಷ್ಟ ಆಗಿದೆ.
ತಿಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande