ಬಾಂಗ್ಲಾದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳಿಗೆ ರಕ್ಷಣೆ ಒದಗಿಸಿ
ವಿಜಯಪುರ, 24 ಡಿಸೆಂಬರ್ (ಹಿ.ಸ.); ಆ್ಯಂಕರ್:ಬಾಂಗ್ಲಾದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳಿಗೆ ಆ ದೇಶ ರಕ್ಷಣೆ ಒದಗಿಸಬೇಕು. ಭಾರತದಲ್ಲಿರುವ ಬಾಂಗ್ಲಾದೇಶದ ರಾಯಬಾರಿ ಆ ದೇಶಕ್ಕೆ ತುರ್ತು ಸಂದೇಶ ರವಾನಿಸಬೇಕು ಎಂದು ಬಿಜೆಪಿ ನಗರಘಟಕ ಅಧ್ಯಕ್ಷ ಸಂದೀಪ್ ಪಾಟೀಲ ಝಳಕಿ ಆಗ್ರಹಿಸಿದ್ದಾರೆ. ಮಾಧ್ಯಮ ಪ್ರಕಟಣೆಯಲ್
ಬಾಂಗ್ಲಾದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳಿಗೆ ರಕ್ಷಣೆ ಒದಗಿಸಿ


ವಿಜಯಪುರ, 24 ಡಿಸೆಂಬರ್ (ಹಿ.ಸ.);

ಆ್ಯಂಕರ್:ಬಾಂಗ್ಲಾದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳಿಗೆ ಆ ದೇಶ ರಕ್ಷಣೆ ಒದಗಿಸಬೇಕು. ಭಾರತದಲ್ಲಿರುವ ಬಾಂಗ್ಲಾದೇಶದ ರಾಯಬಾರಿ ಆ ದೇಶಕ್ಕೆ ತುರ್ತು ಸಂದೇಶ ರವಾನಿಸಬೇಕು ಎಂದು ಬಿಜೆಪಿ ನಗರಘಟಕ ಅಧ್ಯಕ್ಷ ಸಂದೀಪ್ ಪಾಟೀಲ ಝಳಕಿ ಆಗ್ರಹಿಸಿದ್ದಾರೆ.

ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ವಿಶ್ವವೇ ಒಂದೆ ಕುಟುಂಬವೆಂಬ ದೃಢ ನಂಬಿಕೆಯಲ್ಲಿದ್ದು ಯಾವುದೇ ದೇಶ ಸಂಕಷ್ಟದಲದಲಿದ್ದರೂ ಅದಕ್ಕೆ ಸ್ಪಂದಿಸುವ ಭಾರತ ದೇಶದ ಹಿರಿಮೆಯಾದರೇ, ಅದೇ ದೇಶದ ಮೂಲನಿವಾಸಿಗಳು ವಿಭಜಿತ ಬಾಂಗ್ಲಾದೇಶದಲ್ಲಿ ಹಿಂದೂ ಸಮಾಜದ ದೀಪು ಚಂದ್ರದಾಸ ಅವರ ಬರ್ಬರ ಹತ್ಯೆ ಖಂಡನೀಯ. ಅಪರಾಧಿಗಳನ್ನು ಬಂಧಿಸಿದರೇ ಸಾಲದು ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಭಾರತ ವಿರೋಧಿತೆಯನ್ನು ಮೈಗೂಡಿಸಿಕೊಂಡಿದ್ದ ಬಾಂಗ್ಲಾದ ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಹತ್ಯೆಯ ನಂತರ ನಡೆದ ಗಲಭೆಯಲ್ಲಿ ದೀಪು ಚಂದ್ರಹಾಸ ಅವರನ್ನು ಅಲ್ಲಿಯ ಮತಿಯವಾದಿಗಳ ಗುಂಪು ಅವರನ್ನು ಬೆಂಕಿ ಹಚ್ಚಿ ಹತ್ಯೆಮಾಡುವ ಮೂಲಕ ತಮ್ಮ ಕ್ರೂರತನ ಪ್ರದರ್ಶಿಸಿದ್ದಾರೆ. ಇದೊಂದು ಮಾನವೀಯತೆಯ ಕಗ್ಗೊಲೆ. ಅಮಾಯಕ ಹಿಂದೂ ಯುವಕನ ಅಮಾನುಷ ಹತ್ಯೆ ನಿಜವಾಗಲು ಅಲ್ಲಿಯ ಅಲ್ಪಸಂಖ್ಯಾತ ಹಿಂದೂಗಳಿಗೆ ರಕ್ಷಣೆ ಇಲ್ಲ ಎನ್ನುವುದು ಜಗಜ್ಜಾಹಿರವಾಗಿದೆ. ರಿಕ್ಷಾ ಚಾಲಕ ಗೋಬಿಂದ್ ಬಿಸ್ವಾಸ್ ಅವರ ಮೇಲೆ‌ ನಡೆದ ಹಲ್ಲೆ, ಈ ಹಿಂದೆ ಅಕ್ಷಯ ಪಾತ್ರೆ ಎಂದು ಖ್ಯಾತಿ ಪಡೆದು ಬಾಂಗ್ಲಾದಲ್ಲಿ ಜಾತಿಮತ ಎನ್ನದೇ ಸಂಕಷ್ಟ ಕಾಲದಲ್ಲಿ ಎಲ್ಲರಿಗೂ ಆಹಾರ ನಿಡುವ ಇಸ್ಕಾನ್‌ದ ಮೇಲಿನ ದಾಳಿ ಖಂಡನೀಯ ಎಂದು ತಿಳಿಸಿದ್ದಾರೆ.

ಭಾರತದ ವೀರ ಸೈನಿಕರ ಬಲಿದಾನ ಪರಾಕ್ರಮ ಮತ್ತು ರಾಜತಾಂತ್ರಿಕ ಸಹಕಾರದಿಂದ ಬಾಂಗ್ಲಾದೇಶ ಸ್ವತ್ರಂತ್ರವಾಗಿದೆ ಎನ್ನುವುದನ್ನು ಆ ದೇಶದ ಕೆಲ ಮತಾಂದರಿಗೆ ಗೊತ್ತಾಗಬೇಕಾಗಿದೆ. ಭಾರತಕ್ಕೆ ಆಸರೆ ಕೆಳಿ ಬಂದ ಆ ದೇಶದ ಮಾಜಿ‌ ಪ್ರಾಧಾನಿಗೆ ಆಶ್ರಯ ನೀಡಿದ್ದು ಭಾರತ, ಅನೇಕ ಸಂಕಷ್ಟ ಸ್ಥಿತಿಯಲ್ಲಿ ಭಾರತ ‌ಸಹಾಯ ಹಸ್ತ ನೀಡಿದೆ. ಬಾಂಗ್ಲಾ ಅಖಂಡ ಭಾರತದ ಭಾಗವಾದರೇ ಇಲ್ಲಿಯ ಮೂಲ‌ನಿವಾಸಿ ಹಿಂದೂಗಳೆ ಅಲ್ಲಿ ಅಲ್ಪಸಂಖ್ಯಾತರಾಗಿ ಅವರನ್ನು ಮಾರಣ ಹೋಮ‌ ಮಾಡುತ್ತಿರುವ ಆ ದೇಶದ ಬಹುಸಂಖ್ಯಾತರ ಕೃತ್ಯ ಖಂಡನೀಯ. ಪ್ರತಿಸಾರಿ ಒಂದಿಲ್ಲ ಒಂದು ಕಾರಣವಿಟ್ಟು ಅಲ್ಲಿಯ ಹಿಂದೂಗಳಿಗೆ ತೊಂದರೆ ನೀಡುತ್ತಿರುವುದನ್ನು ನಿಲ್ಲಿಸಿ ಹಿಂದೂಗಳಿಗೆ ರಕ್ಷಣೆ ನೀಡುವ ವಿಚಾರವನ್ನು ಭಾರತದಲ್ಲಿರುವ ಬಾಂಗ್ಲಾದೇಶದ ರಾಯಬಾರಿ ಆ ದೇಶಕ್ಕೆ ತುರ್ತು ಸಂದೇಶ ರವಾನಿಸಬೇಕು ಎಂದು ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande