ಶಬರಿಮಲೈ ಚಿನ್ನ ಕಳುವು ; ಎಸ್‍ಐಟಿ ಬಳ್ಳಾರಿಯಲ್ಲಿ ಶೋಧ
ಬಳ್ಳಾರಿ, 24 ಡಿಸೆಂಬರ್ (ಹಿ.ಸ.); ಆ್ಯಂಕರ್ : ಶಬರಿಮಲೆ ಅಯ್ಯಪ್ಪ ದೇಗುಲದ ಚಿನ್ನ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿ ಇರುವ ಬಳ್ಳಾರಿಯ ರೊದ್ದಂ ಜ್ಯುವಲರ್ಸ್‍ನ ಮಾಲೀಕ ಗೋವರ್ಧನ ಅವರ ಅಂಗಡಿ ಮತ್ತು ಮನೆಯಲ್ಲಿ ಕೇರಳದ ಎಸ್‍ಐಟಿಯ ಐವರು ಸದಸ್ಯರ ತಂಡವು ಬುಧವಾರ ತನಿಖೆ ನಡೆಸ
ಶಬರಿಮಲೈ ಚಿನ್ನ ಕಳುವು ; ಎಸ್‍ಐಟಿ ಬಳ್ಳಾರಿಯಲ್ಲಿ ಶೋಧ


ಬಳ್ಳಾರಿ, 24 ಡಿಸೆಂಬರ್ (ಹಿ.ಸ.);

ಆ್ಯಂಕರ್ : ಶಬರಿಮಲೆ ಅಯ್ಯಪ್ಪ ದೇಗುಲದ ಚಿನ್ನ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿ ಇರುವ ಬಳ್ಳಾರಿಯ ರೊದ್ದಂ ಜ್ಯುವಲರ್ಸ್‍ನ ಮಾಲೀಕ ಗೋವರ್ಧನ ಅವರ ಅಂಗಡಿ ಮತ್ತು ಮನೆಯಲ್ಲಿ ಕೇರಳದ ಎಸ್‍ಐಟಿಯ ಐವರು ಸದಸ್ಯರ ತಂಡವು ಬುಧವಾರ ತನಿಖೆ ನಡೆಸಿದೆ ಎಂದು ಹೇಳಲಾಗಿದೆ.

ಶಬರಿಮಲೈ ಅಯ್ಯಪ್ಪ ದೇವಸ್ಥಾನದಲ್ಲಿ ನಡೆದಿದೆ ಎನ್ನಲಾಗಿರುವ ಚಿನ್ನ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ

ಗೋವರ್ಧನ್ ಮತ್ತು `ಸ್ಮಾರ್ಟ್ ಕ್ರಿಯೇಷನ್ಸ್'ನ ಸಿಇಒ ಪಂಕಜ್ ಭಂಡಾರಿ ಅವರನ್ನು ಶುಕ್ರವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಹಿನ್ನಲೆಯಲ್ಲಿ ಎಸ್‍ಐಟಿಯ ಐವರು ಸದಸ್ಯರ ತಂಡವು ಬಳ್ಳಾರಿಗೆ ಆಗಮಿಸಿ, ತನಿಖೆ ನಡೆಸಿದೆ ಎಂದು ಹೇಳಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೆÇೀಟಿಯು ಅಯ್ಯಪ್ಪ ದೇವಸ್ಥಾನದ ದ್ವಾರಪಾಲಕ ಮೂರ್ತಿಗಳು ಹಾಗೂ ಗರ್ಭಗುಡಿಯ ದ್ವಾರಕ್ಕೆ ವಿದ್ಯುತ್ ಲೇಪನಕ್ಕಾಗಿ 2019ರಲ್ಲಿ ಸ್ಮಾರ್ಟ್ ಕ್ರಿಯೇಷನ್‍ಗೆ ನೀಡಿದ್ದರು. ಆ ಸಂದರ್ಭದಲ್ಲಿ 400 ಗ್ರಾಂ ಚಿನ್ನವನ್ನು ತೆಗೆದು, ಬಳ್ಳಾರಿಯ ರೊದ್ದಂ ಜ್ಯುಯಲರ್ಸ್‍ನ ಗೋವರ್ಧನಗೆ ಮಾರಾಟ ಮಾಡಿದ್ದರು ಎಂದು ಹೇಳಲಾಗಿದೆ. ಈ ಹಿನ್ನಲೆಯಲ್ಲಿ ಗೋವರ್ಧನ ಅವರ ಬಂಧನವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande