ಬಳ್ಳಾರಿ : ಬಾಂಗ್ಲಾ ಹಿಂದು ಹತ್ಯೆ ಖಂಡಿಸಿ ವಿಶ್ವಸಂಸ್ಥೆಗೆ ದೂರು
ಬಳ್ಳಾರಿ, 24 ಡಿಸೆಂಬರ್ (ಹಿ.ಸ.) ಆ್ಯಂಕರ್ : ಬಾಂಗ್ಲಾ ದೇಶದಲ್ಲಿಯ ಹಿಂದೂಗಳ ಮೇಲೆ ನಡೆಯುತ್ತಿರುವ ಹತ್ಯೆಗಳನ್ನು ಮತ್ತು ದೌರ್ಜನ್ಯಗಳನ್ನು ಖಂಡಿಸಿ ಪ್ರಜ್ಣಾವಂತ ನಾಗರೀಕ ವೇದಿಕೆ ಡಾ. ರಾಜಕುಮಾರ್ ಪಾರ್ಕ್‍ನ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಬುಧವಾರ ಪ್ರತಿಭಟನೆ ನಡೆಸಿ, ವಿಶ್ವಸಂಸ್ಥೆಗೆ ದೂರು ಸಲ್ಲಿ
Complaint to the United Nations condemning the killing of a Bangladeshi Hindu


Complaint to the United Nations condemning the killing of a Bangladeshi Hindu


ಬಳ್ಳಾರಿ, 24 ಡಿಸೆಂಬರ್ (ಹಿ.ಸ.)

ಆ್ಯಂಕರ್ : ಬಾಂಗ್ಲಾ ದೇಶದಲ್ಲಿಯ ಹಿಂದೂಗಳ ಮೇಲೆ ನಡೆಯುತ್ತಿರುವ ಹತ್ಯೆಗಳನ್ನು ಮತ್ತು ದೌರ್ಜನ್ಯಗಳನ್ನು ಖಂಡಿಸಿ

ಪ್ರಜ್ಣಾವಂತ ನಾಗರೀಕ ವೇದಿಕೆ ಡಾ. ರಾಜಕುಮಾರ್ ಪಾರ್ಕ್‍ನ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಬುಧವಾರ ಪ್ರತಿಭಟನೆ ನಡೆಸಿ, ವಿಶ್ವಸಂಸ್ಥೆಗೆ ದೂರು ಸಲ್ಲಿಸಿದೆ.

ವೇದಿಕೆಯ ಮುಖಂಡರಾದ ಕೆ.ಎಂ. ಮಹೇಶ್ವರಸ್ವಾಮಿ ಅವರು ಪ್ರತಿಭಟನೆಯ ನೇತೃತ್ವವಹಿಸಿ, ಬಾಂಗ್ಲಾ ದೇಶದಲ್ಲಿ ಧರ್ಮದ ಆಧಾರದ ಮೇಲಿನ ಹಿಂಸಾಚಾರಗಳು ವಿಶ್ವದ ಮಾನವೀಯತೆಗೆ ವಿರುದ್ಧವಾಗಿದ್ದು, ವಿಶ್ವಸಂಸ್ಥೆಯು ತಕ್ಷಣವೇ ಮಧ್ಯಪ್ರವೇಶಿಸಿ ಈ ದೊಂಬಿಗಳನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.

ಬಾಂಗ್ಲಾ ದೇಶದಲ್ಲಿ ಹಿಂದೂಗಳು ಮತ್ತು ಮುಸ್ಲಿಂಮರ ಮೇಲೆ ಹಲ್ಲೆ-ದೌರ್ಜನ್ಯಗಳು ನಡೆಯುತ್ತಿವೆ. ಹತ್ಯೆಗಳಾಗುತ್ತಿವೆ. ಮಾನವೀಯತೆಯ ಕಗ್ಗೊಲೆ ನಡೆದಿದೆ. ಮುಗ್ಧ ಕಂದಮ್ಮಗಳನ್ನೂ ಹತ್ಯೆ ಮಾಡುತ್ತಿರುವುದು ಅಮಾನವೀಯತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರ ಮತ್ತು ವಿಶ್ವಸಂಸ್ಥೆಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಿಂಧುವಾಳ ಮಹೇಶಗೌಡ, ನಟರಾಜ್, ಸಿ.ಎಂ. ಗಂಗಾಧರಯ್ಯ, ನಿವೃತ್ತ ಪ್ರೊಫೆಸರ್ ಲಿಂಗನಗೌಡ, ಎಣ್ಣೆ ಎರಿಸ್ವಾಮಿ, ಬಂಡೆಗೌಡ, ವಿ.ಎಸ್. ಪ್ರಭಯ್ಯ, ನಾಗಭೂಷಣಗೌಡ, ಡಾ. ದರೂರು ಪುರುಷೋತ್ತಮಗೌಡ, ಶಿವಾರೆಡ್ಡಿ, ಅಶೋಕ್ ದಿನ್ನಿ, ಆನೆ ಗಂಗಣ್ಣ, ಜಿ. ನೀಲಕಂಠಪ್ಪ, ಎಸ್. ಮಲ್ಲನಗೌಡ, ಕೋಳೂರು ಚಂದ್ರಶೇಖರಗೌಡ, ಎಚ್.ಎಂ. ರುದ್ರಯ್ಯ, ಜಾನೆಕುಂಟೆ ಮಂಜುನಾಥ್, ಸೋಮನಗೌಡ, ಎಚ್.ಎಂ. ಕೊಟ್ರೇಶ್, ಹಂಪೇರು ಹಾಲೇಶ್ವರಗೌಡ ಇನ್ನಿತರರು ಪಾಲ್ಗೊಂಡಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande