ಹಾಗರಗುಂಡಗಿ ಭಕ್ತರಿಂದ ಕೊಪ್ಪಳ ಜಾತ್ರೆಗೆ 40 ಕ್ವಿಂಟಾಲ್ ತೊಗರಿ ಬೇಳೆ
ಕೊಪ್ಪಳ, 24 ಡಿಸೆಂಬರ್ (ಹಿ.ಸ.) ಆ್ಯಂಕರ್ : ಶ್ರೀಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಜರುಗಲಿರುವ ಮಹಾದಾಸೋಹಕ್ಕಾಗಿ ಅನೇಕ ಭಕ್ತರು ವಿವಿಧ ರೀತಿಯ ದಾನಗಳನ್ನು ಸಲ್ಲಿಸುವ ಮೂಲಕ ದಾಸೋಹ ಸೇವೆಯನ್ನು ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಕಲಬುರಗಿ ಜಿಲ್ಲೆಯ ಹಾಗರಗುಂಡಗಿ ಗ್ರಾಮದ ಭಕ್ತರು ಈ ವರ್ಷದ
ಹಾಗರಗುಂಡಗಿ ಭಕ್ತರಿಂದ ಕೊಪ್ಪಳ ಜಾತ್ರೆಗೆ 40 ಕ್ವಿಂಟಾಲ್ ತೊಗರಿ ಬೇಳೆ


ಕೊಪ್ಪಳ, 24 ಡಿಸೆಂಬರ್ (ಹಿ.ಸ.)

ಆ್ಯಂಕರ್ : ಶ್ರೀಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಜರುಗಲಿರುವ ಮಹಾದಾಸೋಹಕ್ಕಾಗಿ ಅನೇಕ ಭಕ್ತರು ವಿವಿಧ ರೀತಿಯ ದಾನಗಳನ್ನು ಸಲ್ಲಿಸುವ ಮೂಲಕ ದಾಸೋಹ ಸೇವೆಯನ್ನು ನಡೆಸಿದ್ದಾರೆ.

ಈ ನಿಟ್ಟಿನಲ್ಲಿ ಕಲಬುರಗಿ ಜಿಲ್ಲೆಯ ಹಾಗರಗುಂಡಗಿ ಗ್ರಾಮದ ಭಕ್ತರು ಈ ವರ್ಷದ ಜಾತ್ರಾ ಮಹಾದಾಸೋಹಕ್ಕೆ 40 ಕ್ವಿಂಟಾಲ್ ತೊಗರಿ ಬೇಳೆಯನ್ನು ದೇಣಿಗೆಯಾಗಿ ನೀಡಿರುತ್ತಾರೆ.

ಈ ಗ್ರಾಮದ ಭಕ್ತರು ಕಳೆದ ವರ್ಷ 40 ಕ್ವಿಂಟಾಲ್ ಶೇಂಗಾ ಚಟ್ನಿಯನ್ನು ಮಹಾದಸೋಹಕ್ಕೆ ದಾನವಾಗಿ ನೀಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande