
ಬೆಂಗಳೂರು, 23 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬೆಂಗಳೂರಿನ ಯಶವಂತಪುರ ಮತ್ತು ಹೈದರಾಬಾದ್’ನ ಕಾಚಿಗುಡ ನಡುವೆ ಸಂಚರಿಸುವ ಅತ್ಯಾಧುನಿಕ 'ವಂದೇ ಭಾರತ್ ಎಕ್ಸ್ ಪ್ರೆಸ್' ರೈಲು ಇನ್ನು ಮುಂದೆ ಆಂಧ್ರಪ್ರದೇಶದ ಹಿಂದೂಪುರ ನಿಲ್ದಾಣದಲ್ಲಿಯೂ ನಿಲುಗಡೆಯಾಗಲಿದೆ. ರೈಲ್ವೆ ಮಂಡಳಿಯು, ಡಿಸೆಂಬರ್ 27, 2025 ರಿಂದ ಜಾರಿಗೆ ಬರುವಂತೆ ಎರಡು ನಿಮಿಷಗಳ ಪ್ರಾಯೋಗಿಕ ನಿಲುಗಡೆಗೆ ಅನುಮೋದನೆ ನೀಡಿದೆ.
ಹಿಂದೂಪುರ ನಿಲ್ದಾಣದಲ್ಲಿ ಈ ರೈಲಿನ ಆಗಮನ ಮತ್ತು ನಿರ್ಗಮನದ ವೇಳಾಪಟ್ಟಿ ಹೀಗಿದೆ:
ರೈಲು ಸಂಖ್ಯೆ 20703 ಕಾಚಿಗುಡ-ಯಶವಂತಪುರ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಹಿಂದೂಪುರಕ್ಕೆ ಮಧ್ಯಾಹ್ನ 12:08 ಗಂಟೆಗೆ ತಲುಪಿ, 12:10 ಗಂಟೆಗೆ ಅಲ್ಲಿಂದ ಹೊರಡಲಿದೆ.
ರೈಲು ಸಂಖ್ಯೆ 20704 ಯಶವಂತಪುರ-ಕಾಚೆಗುಡ ವಂದೇ ಭಾರತ್ ಎಕ್ಸ್ ಪ್ರೆಸ್ ಹಿಂದೂಪುರಕ್ಕೆ ಮಧ್ಯಾಹ್ನ 03:48 ಗಂಟೆಗೆ ಆಗಮಿಸಿ, 03:50 ಗಂಟೆಗೆ ತನ್ನ ಪ್ರಯಾಣ ಮುಂದುವರಿಸಲಿದೆ.
ಈ ಹೊಸ ನಿಲುಗಡೆಯು ಹಿಂದೂಪುರ ಭಾಗದ ಪ್ರಯಾಣಿಕರಿಗೆ ವೇಗದ ಮತ್ತು ಸುಸಜ್ಜಿತ ಪ್ರಯಾಣದ ಸೌಲಭ್ಯವನ್ನು ಒದಗಿಸುವುದಲ್ಲದೆ, ಈ ಭಾಗದ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ ಎಂದು ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa