ಭಾಗ್ಯನಗರ : ನಾಳೆ ವಿದ್ಯುತ್ ವ್ಯತ್ಯಯ
ಕೊಪ್ಪಳ, 23 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಜೆಸ್ಕಾಂನ 110 ಕೆವಿ ಕೊಪ್ಪಳ ಉಪಕೇಂದ್ರದ ಎಫ್-8 ಭಾಗ್ಯನಗರ ಫೀಡರ್ ವ್ಯಾಪ್ತಿಯ ವಿವಿಧ ಏರಿಯಾಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯವಾಗಲಿದೆ‌‌. ತುರ್ತು ನಿರ್ವಹಣೆ ಕೆಲಸದ ನಿಮಿತ್ತ ಎಫ್-8 ಭಾಗ್ಯನಗರ ಫೀಡರ್ ವ್ಯಾಪ್ತಿಯ ಗಣೇಶ ನಗರ, ಕೆಎಚ್‌ಬಿ ಕಾಲೋನಿ
ಭಾಗ್ಯನಗರ : ನಾಳೆ ವಿದ್ಯುತ್ ವ್ಯತ್ಯಯ


ಕೊಪ್ಪಳ, 23 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಜೆಸ್ಕಾಂನ 110 ಕೆವಿ ಕೊಪ್ಪಳ ಉಪಕೇಂದ್ರದ ಎಫ್-8 ಭಾಗ್ಯನಗರ ಫೀಡರ್ ವ್ಯಾಪ್ತಿಯ ವಿವಿಧ ಏರಿಯಾಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯವಾಗಲಿದೆ‌‌.

ತುರ್ತು ನಿರ್ವಹಣೆ ಕೆಲಸದ ನಿಮಿತ್ತ ಎಫ್-8 ಭಾಗ್ಯನಗರ ಫೀಡರ್ ವ್ಯಾಪ್ತಿಯ ಗಣೇಶ ನಗರ, ಕೆಎಚ್‌ಬಿ ಕಾಲೋನಿ, ಗುಪ್ತಾ ಅಪಾರ್ಟಮೆಂಟ್, ಧನವಂತರಿ ಕಾಲೋನಿ, ಕೀರ್ತಿ ಕಾಲೋನಿ, ಪದ್ಮಾವತಿ ಕಾಲೋನಿ ಹಾಗೂ ಅಡವಿ ಅಂಜನೇಯ ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು‌.

ನಿರ್ವಹಣೆ ಕಾರ್ಯವು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಂಡಲ್ಲಿ ಯಾವುದೇ ಸಮಯದಲ್ಲೂ ವಿದ್ಯುತ್ ಸರಬರಾಜು ಪುನಃ ಪ್ರಾರಂಭಿಸಲಾಗುವುದು. ಈ ಅವಧಿಯಲ್ಲಿ ಸಾರ್ವಜನಿಕರು ಯಾವುದೇ ವಿಧದ ವಿದ್ಯುತ್ ದುರಸ್ತಿ ಅಥವಾ ಸಂಬಂಧಿತ ಕೆಲಸಗಳನ್ನು ಕೈಗೊಳ್ಳಬಾರದೆಂದು ಸೂಚಿಸಲಾಗಿದೆ. ವಿದ್ಯುತ್ ಅಪಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರರಾಗಿರುವುದಿಲ್ಲ ಎಂದು ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande