ರೈತರಿಗೆ ವೃತ್ತಿ ಆಧಾರಿತ ಮೀಸಲಾತಿ ಅಗತ್ಯ : ಬಸವರಾಜ ಬೊಮ್ಮಾಯಿ
ಕಲಬುರಗಿ, 23 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರೈತರಿಗೆ ವೃತ್ತಿ ಆಧಾರಿತ ಮೀಸಲಾತಿಯನ್ನು ತರುವ ವ್ಯವಸ್ಥೆ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಆಗಬೇಕು. ಆಗ ಮಾತ್ರ ರೈತರ ಮಕ್ಕಳಿಗೆ ಉದ್ಯೋಗ ಸಿಗುತ್ತದೆ. ಇಲ್ಲದಿದ್ದರೆ ರೈತರ ಸಂಖ್ಯೆ ಕಡಿಮೆ ಆಗುತ್ತದೆ. ದೇಶದಲ್ಲಿ ರೈತ ಕೇಂದ್ರಿತ ಯೋಜನೆಗಳು ಬೇಕಿವೆ
Farmer day


ಕಲಬುರಗಿ, 23 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರೈತರಿಗೆ ವೃತ್ತಿ ಆಧಾರಿತ ಮೀಸಲಾತಿಯನ್ನು ತರುವ ವ್ಯವಸ್ಥೆ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಆಗಬೇಕು. ಆಗ ಮಾತ್ರ ರೈತರ ಮಕ್ಕಳಿಗೆ ಉದ್ಯೋಗ ಸಿಗುತ್ತದೆ. ಇಲ್ಲದಿದ್ದರೆ ರೈತರ ಸಂಖ್ಯೆ ಕಡಿಮೆ ಆಗುತ್ತದೆ. ದೇಶದಲ್ಲಿ ರೈತ ಕೇಂದ್ರಿತ ಯೋಜನೆಗಳು ಬೇಕಿವೆ. ರೈತ ಬಲಿಷ್ಠವಾಗಿದ್ದರೆ ದೇಶ ಬಲಿಷ್ಠವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ರಾಷ್ಟ್ರೀಯ ರೈತರ ದಿನಾಚರಣೆ ಅಂಗವಾಗಿ ಕಲಬುರ್ಗಿಯಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಏರ್ಪಡಿಸಿದ್ದ ವಿಶ್ವ ರೈತ ದಿನ, ರೈತರ ಹಬ್ಬ ರಾಷ್ಟ್ರೀಯ ರೈತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಕೃಷಿ ಮತ್ತು ರೈತರ ಯೋಜನೆಗಳು ಮೊದಲ ಮೂರು ಪಂಚವಾರ್ಷಿಕ ಯೋಜನೆಯಲ್ಲಿ ಪ್ರಸ್ತಾಪವೇ ಆಗಿಲ್ಲ. ರೈತರನ್ನು ಬಿಟ್ಟು ದೇಶ ಕಟ್ಟಲು ಸಾಧ್ಯವಿಲ್ಲ, ರೈತರನ್ನು ಶಕ್ತಿ ಶಾಲಿ ಮಾಡಿದರೆ ದೇಶ ಶಕ್ತಿಶಾಲಿಯಾಗುತ್ತದೆ, ಬಹಳ ಜನರಿಗೆ ತಪ್ಪು ಕಲ್ಪನೆ ಇದೆ. ಯಾವ ದೇಶ ಆಹಾರದಲ್ಲಿ ಸ್ವಾವಲಂಬನೆ ಆಗಿರುತ್ತದೆ. ಆ ದೇಶ ಸ್ವಾಭಿಮಾನಿ ಆಗಿರುತ್ತದೆ. ಈಗ ದೇಶ ಸ್ವಾಭಿಮಾನಿಯಾಗಲು ಹಸಿರು ಕ್ರಾಂತಿ ಅದಕ್ಕೆ ರೈತ ಕಾರಣ. ಕೃಷಿ ಬೆಳೆಸಿದ ರೈತ ಬೆಳೆಯಲಿಲ್ಲ. ಇದಕ್ಕೆ ಬದಲಾಗುತ್ತಿರುವ ಅಂತಾರಾಷ್ಟ್ರೀಯ, ರಾಷ್ಟ್ರೀಯ ಕಾನೂನುಗಳು ಕಾರಣ. ನಾನು ಮುಖ್ಯಮಂತ್ರಿ ಇದ್ದಾಗ ಹಲವಾರು ಕಾನೂನು ಮಾಡಿದ್ದೇನೆ. ಈಗ ಎಂಪಿಯಾಗಿ ರೈತರ ಪರ ಕೆಲಸ ಮಾಡುತ್ತಿದ್ದೇನೆ. ರೈತ ಕೇಂದ್ರಿತ ಯೋಜನೆಗಳು ಬೇಕಿವೆ. ರೈತ ಬಲಿಷ್ಠವಾಗಿದ್ದರೆ ದೇಶ ಬಲಿಷ್ಠವಾಗುತ್ತದೆ. ಶೇ 50 ರಿಂದ 60 ರಷ್ಟು ಜನರು ಕೃಷಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಕೃಷಿಯಲ್ಲಿ ಶೇ 60 ರಷ್ಟು ಉದ್ಯೋಗ ಇಲ್ಲದಿದ್ದರೆ ಈ ದೇಶದ ಪರಿಸ್ಥಿತಿ ಏನಾಗುತ್ತಿತ್ತು ? ಅತಿ ಹೆಚ್ಚು ಉದ್ಯೋಗ ಕೊಡುವ ಕೃಷಿಯಲ್ಲಿ ನೆಮ್ಮದಿಯಿಂದ 60 ರಷ್ಟು ಜನರು ಕೆಲಸ ಮಾಡುತ್ತಿದ್ದಾರೆ. ನಮ್ಮ ದೇಶದಲ್ಲಿ 60 ರಷ್ಟು ಜನ ಕೃಷಿಯಲ್ಲಿ ಕೆಲಸ ಮಾಡುತ್ತಿರಿದ್ದರೂ, ಶೇ 6 ರಷ್ಟು ಕೃಷಿಗೆ ಸಬ್ಸಿಡಿ ಸಿಗುತ್ತಿದೆ. ಅಮೇರಿಕಾದಲ್ಲಿ ಶೇ 6 ರಷ್ಟು ಜನ ಕೃಷಿಯಲ್ಲಿದ್ದಾರೆ. ಅವರಿಗೆ ಶೇ 60 ರಷ್ಟು ಸಬ್ಸಿಡಿ ಸಿಗುತ್ತಿದೆ. ಅವರ ಜೊತೆ ಹೇಗೆ ಪೈಪೋಟಿ ಮಾಡುವುದು. ಅಂತಾರಾಷ್ಟ್ರೀಯ ಪೈಪೋಟಿ ಕೊಡುವ ರೈತ ಕೇಂದ್ರಿತ ಯೋಜನೆ ಜಾರಿ ಮಾಡಬೇಕು ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande