





ಬಳ್ಳಾರಿ, 23 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ‘ಕರ್ಪೂರದ ಬೆಳಗು’ ನಾಟಕವು ಕೇವಲ ರಂಗಪ್ರದರ್ಶನ ಆಗಿರದೇ ಆಧ್ಯಾತ್ಮಿಕ-ಸಾಂಸ್ಕøತಿಕ ಅನುಭವವಾಗಿ ಪಾತ್ರಗಳಲ್ಲಿ ಅನುಭೂತಿಗೊಳ್ಳಲಿದೆ ಎಂದು ಲೇಖಕ ಸಿದ್ದರಾಮ ಕಲ್ಮಠ ಅವರು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು , ಶರಣ ಶ್ರೀ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರಿ ಸಂಘ ಹಾಗೂ ವೀರಶೈವ ತರುಣ ಸಂಘ ಇವರ ಸಹಯೋಗದಲ್ಲಿ ಸಿದ್ಧರಾಮ ಕಲ್ಮಠ ಅವರು ರಚಿಸಿರುವ, ಮಹಾಂತೇಶ್ ರಾಮದುರ್ಗ ಅವರು ನಿರ್ದೇಶಿಸಿರುವ `ಕರ್ಪೂರದ ಬೆಳೆಗು'ವನ್ನು ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆದ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
`ಕರ್ಪೂರದ ಬೆಳಗು' ಕಾಯಕ, ದಾಸೋಹ, ಭಕ್ತಿ, ತತ್ವ ಮತ್ತು ಧರ್ಮ - ಆಧ್ಯಾತ್ಮೆಗಳನ್ನು ಒಳಗೊಂಡಿದೆ. 18ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಖ್ಯಾತರಾಗಿದ್ದ ಶಿವಶರಣ, ಪವಾಡಪುರುಷ ಮರಿಸ್ವಾಮಿಗಳು ಮತ್ತು ಅವರ ಶಿಷ್ಯ ಶರಣ ಸಕ್ಕರೆ ಕರಡೀಶ ಅವರ
ಗುರು - ಶಿಷ್ಯ ಸಂಬಂಧವನ್ನು ಸಾಕ್ಷೀಕರಿಸುತ್ತಿದೆ ಎಂದರು.
ಕಲಾವಿದರಾದ ಬಿ. ರುದ್ರಯ್ಯ, ಸಿದ್ಧರಾಮ ಕಲ್ಮಠ, ಜೋಳದರಾಶಿ ಬಸವರಾಜ, ವೀರೇಶ ಕರಡಕಲ್, ಕೆ.ಎಂ. ಸಿದ್ದಲಿಂಗಯ್ಯ, ಹೆಚ್.ಎಂ. ಜಗದೀಶಯ್ಯ (ಕೊಳಗಲ್), ಹೆಚ್.ಎಂ. ಅಮರೇಶ್, ಡಾ. ಗಂಗಾಧರ ದುಗರ್ಂ, ಎ.ಎಂ.ಪಿ. ವೀರೇಶಸ್ವಾಮಿ, ಎಂ. ದಕ್ಷಿಣಾಮೂರ್ತಿ, ಡಾ. ಬಿ. ಗೋವಿಂದರಾಜು, ಚಾಂದ್‍ಪಾಷಾ, ಸುಬ್ಬಣ್ಣ ಶಿಳ್ಳೆಕ್ಯಾತರ, ಎಂ. ಮಲ್ಲಿಕಾರ್ಜುನ, ಹಳ್ಳಿ ಸಿದ್ದನಗೌಡ, ಶಿವಪುತ್ರ, ಕಿರಣ್ ಕುಮಾರ್, ಅಗಸ್ತ್ಯ ಕಲ್ಮಠ, ಮಲ್ಲಿಕಾರ್ಜುನ ದೇವರಮನೆ ಹಾಗೂ ವೀರೇಶ ಅವರು ತಮ್ಮ ಪಾತ್ರಗಳಲ್ಲಿ ಜೀವತುಂಬಿ, ಪ್ರೇಕ್ಷಕರ ಮನದಲ್ಲಿ ಭಕ್ತಿಯನ್ನು ಮೂಡಿಸಿದರು.
ಸ್ತ್ರೀ ಕಲಾವಿದರಾದ ಶ್ರೀಮತಿ ಜಯಶ್ರೀ ಪಾಟೀಲ, ಶ್ರೀಮತಿ ಭವಾನಿ (ಹಿರಿಯೂರು), ಶ್ರೀಮತಿ ಲತಾಶ್ರೀ (ದಾವಣಗೆರೆ) ಹಾಗೂ ಕುಮಾರಿ ಆರ್.ಎಂ. ಕೃಪಾ, ಕೆ. ಮನ್ವಿತಾ ಅವರ ಅಭಿನಯ ನಾಟಕಕ್ಕೆ ಭಾವನಾತ್ಮಕ ಸ್ಪರ್ಶವನ್ನು ನೀಡಿತು.
ಮುದ್ದಟನೂರು ತಿಪ್ಪೇಸ್ವಾಮಿ ಅವರು ಹಿನ್ನಲೆ ಗಾಯನ ಮಾಡಿದ್ದು, ಹಾಡುಗಳನ್ನು ಸಂಯೋಜಿಸಿದ ಗಾಯಕ ಕೆ. ವಸಂತಕುಮಾರ್, ಹಿನ್ನೆಲೆ ಗಾಯನದಲ್ಲಿ ಪುಟ್ಟರಾಜು ಮತ್ತು ಕು. ತಸ್ಮಯ ಅವರು ಪಾತ್ರಗಳಿಗೆ ಇಂಪನ್ನು ನೀಡಿತ್ತು.
ಅಮರೇಶ ಸಿರಿಗೇರಿ ಮತ್ತು ರಮೇಶ ಅವರು ಧ್ವನಿ ಮತ್ತು ಬೆಳಕನ್ನು ನಿರ್ವಹಿಸಿದರು. ಕೆ.ಹರೀಶ್ ಅವರ ಪ್ರಸಾಧನ - ಮಂಜುನಾಥ ಗೋವಿಂದವಾಡ ಅವರ ರಂಗಸಜ್ಜಿಗೆ ಪ್ರೇಕ್ಷಕರ ಮನಸೂರೆಗೊಂಡಿತು. ವೀಭೂತಿ ಎರ್ರಿಸ್ವಾಮಿ ಅವರ ತಂಡದ ಮೇಲ್ವಿಚಾರಣೆ ಸಕಾಲಿಕವಾಗಿತ್ತು. ನಾಟಕವನ್ನು ಸಾವಿರಾರು ಪ್ರೇಕ್ಷಕರು ಮೂರು ಗಂಟೆಯ ಕಾಲ ಮೂಕ ವಿಸ್ಮಿತರಾಗಿ ವೀಕ್ಷಿಸಿದ್ದು ವಿಶೇಷವಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್