ಸಂಘವನ್ನು ನೋಡಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ : ಮೋಹನ್ ಭಾಗವತ್
ಕೋಲ್ಕತ್ತಾ, 21 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್) ಕೇವಲ ಹೊರಗಿನಿಂದ ನೋಡಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ; ಅದನ್ನು ಅನುಭವಿಸಿದಾಗ ಮಾತ್ರ ಅದರ ನಿಜವಾದ ಸ್ವರೂಪ ತಿಳಿಯುತ್ತದೆ ಎಂದು ಸಂಘದ ಸರಸಂಘಚಾಲಕ್ ಮೋಹನ್ ಭಾಗವತ್ ಹೇಳಿದರು. ಭಾನುವಾರ ಕೋಲ್ಕತ
RSS


ಕೋಲ್ಕತ್ತಾ, 21 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್) ಕೇವಲ ಹೊರಗಿನಿಂದ ನೋಡಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ; ಅದನ್ನು ಅನುಭವಿಸಿದಾಗ ಮಾತ್ರ ಅದರ ನಿಜವಾದ ಸ್ವರೂಪ ತಿಳಿಯುತ್ತದೆ ಎಂದು ಸಂಘದ ಸರಸಂಘಚಾಲಕ್ ಮೋಹನ್ ಭಾಗವತ್ ಹೇಳಿದರು.

ಭಾನುವಾರ ಕೋಲ್ಕತ್ತಾದ ಸೈನ್ಸ್ ಸಿಟಿ ಸಭಾಂಗಣದಲ್ಲಿ ನಡೆದ “ಸಂಘದ 100 ವರ್ಷಗಳು – ಹೊಸ ದಿಗಂತಗಳು” ಉಪನ್ಯಾಸ ಮಾಲಿಕೆಯ ಮೊದಲ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅವರು, ಇಡೀ ಜಗತ್ತಿಗೆ ಸಂಘದ ಹೆಸರು ತಿಳಿದಿದ್ದರೂ, ಅದರ ಕಾರ್ಯವೈಖರಿ ಬಗ್ಗೆ ಸರಿಯಾದ ಗ್ರಹಿಕೆ ಇಲ್ಲ, ಸಂಘದ ಹಿತೈಷಿಗಳಲ್ಲಿಯೂ ಸಹ ಅದರ ಚಟುವಟಿಕೆಗಳ ಬಗ್ಗೆ ಪೂರ್ಣ ಮಾಹಿತಿ ಇಲ್ಲ ಎಂದು ಹೇಳಿದರು.

ಸಂಘವನ್ನು ಹೆಚ್ಚಾಗಿ ಬಿಜೆಪಿ ಮೂಲಕ ಅಳೆಯುವ ಪ್ರಯತ್ನ ನಡೆಯುತ್ತಿದೆ ಇದು ತಪ್ಪು ದೃಷ್ಟಿಕೋನ ಎಂದು ಸ್ಪಷ್ಟಪಡಿಸಿದ ಭಾಗವತ್, ಇಂದು ದೇಶದಾದ್ಯಂತ ಸುಮಾರು 1.20 ಲಕ್ಷ ಸೇವಾ ಯೋಜನೆಗಳ ಮೂಲಕ ಸಂಘವು ಸಮಾಜ ಮತ್ತು ರಾಷ್ಟ್ರದ ಉನ್ನತಿಗಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. ಸಂಘವನ್ನು ಅರ್ಥಮಾಡಿಕೊಳ್ಳಲು, ವ್ಯಕ್ತಿಯು ತನ್ನ ಪೂರ್ವಗ್ರಹಗಳನ್ನು ಬದಿಗಿಟ್ಟು ಅದರೊಂದಿಗೆ ನೇರ ಅನುಭವ ಹೊಂದಬೇಕು ಎಂದು ಅವರು ಹೇಳಿದರು.

ಸಂಘದ ಸ್ಥಾಪನೆಯ ಹಿನ್ನೆಲೆಯನ್ನು ವಿವರಿಸಿದ ಭಾಗವತ್, ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ವಿರೋಧವಾಗಿ, ಸ್ಪರ್ಧೆಗಾಗಿ ಅಥವಾ ಸಾಧನೆಗಾಗಿ ಸಂಘವನ್ನು ಸ್ಥಾಪಿಸಲಾಗಿಲ್ಲ ಎಂದು ಹೇಳಿದರು. ಹಿಂದೂ ಸಮಾಜದ ಒಟ್ಟಾರೆ ಉನ್ನತಿಗಾಗಿ ಸಂಘ ಅಸ್ತಿತ್ವಕ್ಕೆ ಬಂದಿತೆಂದು ಅವರು ತಿಳಿಸಿದರು.

ದೇಶದ ಪ್ರಸ್ತುತ ಪರಿಸ್ಥಿತಿಗಳ ಕುರಿತು ಮಾತನಾಡಿದ ಅವರು, ಭಾರತವು ಇತಿಹಾಸದಲ್ಲಿ ನಿರಂತರವಾಗಿ ಬಾಹ್ಯ ದಾಳಿಗಳನ್ನು ಎದುರಿಸಿದೆ ಎಂದು ಸ್ಮರಿಸಿದರು. ಬ್ರಿಟಿಷರಿಗಿಂತಲೂ ಮುಂಚೆಯೇ ಗುಲಾಮಗಿರಿಯ ನೋವನ್ನು ದೇಶ ಅನುಭವಿಸಿದೆ ಎಂದರು. ಇಂತಹ ಸಂದರ್ಭದಲ್ಲೇ ಹಿಂದೂ ಸಮಾಜವನ್ನು ಸಂಘಟಿಸುವ ಅಗತ್ಯ ಎದುರಾಯಿತು ಎಂದು ವಿವರಿಸಿದರು.

ಸಮಾಜದ ನಡವಳಿಕೆ ಮತ್ತು ಗುಣಮಟ್ಟವನ್ನು ಸುಧಾರಿಸಲು ದೇಶವ್ಯಾಪಿ ಕಾರ್ಯಕರ್ತರ ಸಂಘಟನೆ ಅಗತ್ಯವಾಗಿತ್ತು. ಹಿಂದೂ ಧರ್ಮವು ಕೇವಲ ಧಾರ್ಮಿಕ ಗುರುತಲ್ಲ; ಅದು ಎಲ್ಲರನ್ನೂ ಒಳಗೊಂಡು, ಸರ್ವಜನ ಹಿತವನ್ನು ಬಯಸುವ ಜೀವನ ಮೌಲ್ಯವಾಗಿದೆ ಎಂದು ಭಾಗವತ್ ಹೇಳಿದರು. ಭಾರತವನ್ನು ತಾಯಿಯಾಗಿ ಪೂಜಿಸುವ ಪ್ರತಿಯೊಬ್ಬರೂ ಹಿಂದೂ ಎಂಬುದೇ ಅದರ ಅರ್ಥ ಎಂದು ಅವರು ಸ್ಪಷ್ಟಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande