ಅಟಲ್ ಜನ್ಮ ಶತಮಾನೋತ್ಸವ ; ಮಧ್ಯಪ್ರದೇಶಕ್ಕೆ ಉಪರಾಷ್ಟ್ರಪತಿ ಭೇಟಿ
ಇಂದೋರ್, 21 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಮಾಜಿ ಪ್ರಧಾನಿ ಭಾರತ ರತ್ನ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮ ದಿನಾಚರಣೆಯ ಅಂಗವಾಗಿ ಇಂದು ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಆಯೋಜಿಸಲಾದ ‘ಶೂನ್ಯದಿಂದ ಶತಮಾನ’ ವಿಶೇಷ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಮುಖ್ಯ ಅ
Vp


ಇಂದೋರ್, 21 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಮಾಜಿ ಪ್ರಧಾನಿ ಭಾರತ ರತ್ನ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮ ದಿನಾಚರಣೆಯ ಅಂಗವಾಗಿ ಇಂದು ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಆಯೋಜಿಸಲಾದ ‘ಶೂನ್ಯದಿಂದ ಶತಮಾನ’ ವಿಶೇಷ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಒಂದು ದಿನದ ಮಧ್ಯಪ್ರದೇಶ ಭೇಟಿಗಾಗಿ ಉಪರಾಷ್ಟ್ರಪತಿ ಇಂದು ಮಧ್ಯಾಹ್ನ ಇಂದೋರ್‌ಗೆ ಆಗಮಿಸಲಿದ್ದು, ಡಾಲಿ ಕಾಲೇಜಿನ ಧೀರೂಭಾಯಿ ಅಂಬಾನಿ ಸಭಾಂಗಣದಲ್ಲಿ ನಡೆಯುವ ಈ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ಮಂಗುಭಾಯಿ ಪಟೇಲ್ ಮತ್ತು ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಸಹ ಉಪಸ್ಥಿತರಿರಲಿದ್ದಾರೆ.

ಅಟಲ್ ಫೌಂಡೇಶನ್ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ನಾಲ್ವರು ಗಣ್ಯ ವಿದ್ವಾಂಸರಿಗೆ ‘ಅಟಲ್ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಖ್ಯಾತ ಕವಿ ಸತ್ಯನಾರಾಯಣ್ ಸತ್ತನ್, ಮಾಜಿ ಕೇಂದ್ರ ಸಚಿವ ಸತ್ಯನಾರಾಯಣ್ ಜತಿಯಾ, ಮಾಜಿ ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಸದಸ್ಯ ಸಂಜಯ್ ಜಗದಾಳೆ ಹಾಗೂ ಸಾಗರ್‌ನ ಪರಾಂಗ್ ಶುಕ್ಲಾ ಅವರಿಗೆ ಈ ಗೌರವ ಲಭಿಸಲಿದೆ.

ಮಧ್ಯಾಹ್ನ 3 ಗಂಟೆಗೆ ಆರಂಭವಾಗುವ ಕಾರ್ಯಕ್ರಮದಲ್ಲಿ ಬಿಎಸ್‌ಎಫ್ ಬ್ಯಾಂಡ್‌ನಿಂದ ‘ವಂದೇ ಮಾತರಂ’ ಗಾಯನ ನಡೆಯಲಿದ್ದು, ಅಟಲ್ ಜಿ ಅವರ ಜೀವನ ಹಾಗೂ ಸಾಧನೆಗಳನ್ನು ಒಳಗೊಂಡ ಕಿರುಚಿತ್ರವನ್ನು ಪ್ರದರ್ಶಿಸಲಾಗುವುದು. ಜೊತೆಗೆ, ಅಟಲ್ ಜಿ ಅವರ ಆತ್ಮಚರಿತ್ರೆಗಳನ್ನು ಆಧರಿಸಿದ ‘ಸದಾ ಅಟಲ್ ಮಹಾಗ್ರಂಥ’ದ ಮೂರನೇ ಆವೃತ್ತಿಯ ಮುಖಪುಟ ಬಿಡುಗಡೆಗೊಳ್ಳಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande