ನಾಗನಾಳದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಟೈಲರಿಂಗ್ ತರಬೇತಿ
ನಾಗನಾಳದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಟೈಲರಿಂಗ್ ತರಬೇತಿ
ಕೋಲಾರ ಜಿಲ್ಲೆಯ ವೇಮಗಲ್ ವ್ಯಾಪ್ತಿಯ ನಾಗನಾಳ ಗ್ರಾಮದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಹೊಲಿಗೆ ತರಬೇತಿ ಕಾರ್ಯಕ್ರಮವನ್ನು ಯೋಜನಾಧಿಕಾರಿ ರಘು ಉದ್ಘಾಟಿಸಿದರು.


ಕೋಲಾರ, ೦೨ ಡಿಸೆಂಬರ್ (ಹಿ.ಸ) :

ಆ್ಯಂಕರ್ : ಜಿಲ್ಲೆಯ ವೇಮಗಲ್ ವ್ಯಾಪ್ತಿಯ ನಾಗನಾಳ ಗ್ರಾಮದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಹೊಲಿಗೆ ತರಬೇತಿ ಕಾರ್ಯಕ್ರಮವನ್ನು ಯೋಜನಾಧಿಕಾರಿ ರಘು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜ್ಞಾನ ವಿಕಾಸದ ಕಾರ್ಯಕ್ರಮ ಮಹತ್ವ ಯೋಜನೆಯ ಕಾರ್ಯಕ್ರಮಗಳು ಸ್ವಉದ್ಯೋಗಕ್ಕೆ ಪೂರಕವಾದ ತರಬೇತಿಗಳ ಕುರಿತು ಮಾಹಿತಿ ನೀಡಿದರು.

ಧರ್ಮಸ್ಥಳ ಯೋಜನೆಯಿಂದ ದೇವಾಲಯಗಳ ಅಭಿವೃದ್ದಿಗೆ ನೆರವು, ಸಂಕಷ್ಟದಲ್ಲಿರುವ ಅನಾಥರಿಗೆ, ವಿಕಲಚೇತನರಿಗೆ ಮಾಸಿಕ ವೇತನ ನೀಡಿಕೆ, ಶಾಲೆಗಳಿಗೆ ಶಿಕ್ಷಕರ ನೇಮಕಕ್ಕೆ ಗೌರವಧನ ನೀಡಿಕೆ, ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ನೆರವು, ಶಾಲೆಗಳಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ನೆರವು, ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಹೀಗೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರಲಾಗಿದೆ.ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಶಶಿಕುಮಾರ್ ಮಾತನಾಡಿ, ಅತಿ ಕಡು ಬಡವರು ಸ್ವಉದ್ಯೋಗ ತರಬೇತಿಯನ್ನು ಪಡೆದುಕೊಂಡು ಉತ್ತಮ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿರುವ ಬಗ್ಗೆ ಕುಟುಂಬಗಳು ಅಭಿವೃದ್ಧಿ ಆಗಿರುವ ಕುರಿತು ಮಾಹಿತಿಯನ್ನು ನೀಡಿದರು.

ಜಿಲ್ಲೆ ಜೀವನಾಡಿಗಳಾದ ಕೆರೆಗಳ ಪುನಶ್ಚೇತನಕ್ಕೆ ಆದ್ಯತೆ ನೀಡಿ ಪುನಶ್ಚೇತನದ ಕೆಲಸ ಮಡಲಾಗುತ್ತಿದೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮಾಜಿಕ ಕಾರ್ಯಗಳಲ್ಲಿ ಸಿಂಹ ಪಾಲು ಕೋಲಾರ ಜಿಲ್ಲೆಗೆ ಸಿಕ್ಕಿದ್ದು, ಇಂತಹ ಕಾರ್ಯಕ್ಕೆ ನೆರವಾಗಿರುವ ಪೂಜ್ಯ ಹೆಗಡೆಯವರು ಗ್ರಾಮೀಣ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಕೋಟ್ಯಾಂತರ ರೂ ಸಾಲದ ನೆರವು ಒದಗಿಸುವ ಮೂಲಕ ಮಹಿಳಾ ಸ್ವಾವಲಂಬನೆಗೆ ಯೋಜನೆ ಒತ್ತು ನೀಡಿದೆ ಎಂದ ಅವರು, ಕೆರೆಗಳ ತವರಾದ ಕೋಲಾರ ಜಿಲ್ಲೆಯಲ್ಲಿ ಕೆರೆಗಳ ಪುನಶ್ಚೇತನಕ್ಕೂ ಹೆಚ್ಚಿನ ನೆರವು ಒದಗಿಸಲಾಗಿದ್ದು, ಅನೇಕ ಕೆರೆಗಳ ಪುನರುಜ್ಜೀವನ ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಂದರ್ಯ, ಟೈಲರಿಂಗ್ ಟೀಚರ್ ಗೌರಮ್ಮ ಸಮನ್ವಯಾಧಿಕಾರಿ ಶಿಲ್ಪ, ಮೇಲ್ವಿಚಾರಕ ನಂದೀಶ್, ಸೇವಾ ಪ್ರತಿನಿಧಿ ಸುಜಾತ ಉಪಸ್ಥಿತರಿದ್ದರು.

ಚಿತ್ರ : ಕೋಲಾರ ಜಿಲ್ಲೆಯ ವೇಮಗಲ್ ವ್ಯಾಪ್ತಿಯ ನಾಗನಾಳ ಗ್ರಾಮದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಹೊಲಿಗೆ ತರಬೇತಿ ಕಾರ್ಯಕ್ರಮವನ್ನು ಯೋಜನಾಧಿಕಾರಿ ರಘು ಉದ್ಘಾಟಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande