
ಗದಗ, 02 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಗದಗ ತಾಲ್ಲೂಕಿನ ತಿಮ್ಮಾಪೂರ ಗ್ರಾಮದ ನಿವಾಸಿ, ವಕೀಲರಾದ ಸುರೇಶ ಬಿಸನಳ್ಳಿ ಅವರು ನೋಟರಿಯಾಗಿ ನೇಮಕಗೊಂಡಿದ್ದಾರೆ.
ಸುರೇಶ ಬಿಸನಳ್ಳಿ ಅವರು ಕಳೆದ ಹನ್ನೆರಡು ವರ್ಷಗಳಿಂದ ಗದಗನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಕರ್ನಾಟಕ ರಾಜ್ಯ ಸರ್ಕಾರವು ಅವರನ್ನು ನೋಟರಿಯಾಗಿ ನೇಮಕ ಮಾಡಿದೆ.
ನೂತನವಾಗಿ ನೋಟರಿಯಾಗಿ ನೇಮಕಗೊಂಡ ಸುರೇಶ ಬಿಸನಳ್ಳಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ರೋಣ ಶಾಸಕರಾದ ಜಿ.ಎಸ್. ಪಾಟೀಲ, ಗದಗ ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ವಿ.ಆರ್. ಗುಡಿಸಾಗರ, ಗದಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಜಿ. ಕಲ್ಲೂರ, ನ್ಯಾಯವಾದಿ ಹಾಗೂ ಕರ್ನಾಟಕ ವಕೀಲರ ಪರಿಷತ್‌ನ ವಕೀಲರ ಕಲ್ಯಾಣ ನಿಧಿ ಸದಸ್ಯ ಎಸ್.ಕೆ. ನದಾಫ ಸೇರಿ ಎಲ್ಲ ಹಿರಿಯ-ಕಿರಿಯ ನ್ಯಾಯವಾದಿಗಳು ಅಭಿನಂದಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP