
ನವದೆಹಲಿ, 02 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸಂಚಾರ್ ಸಾಥಿ ಆ್ಯಪ್‌ನ್ನು ಕಡ್ಡಾಯವಾಗಿ ಮೊಬೈಲ್‌ಗಳಲ್ಲಿ ಪೂರ್ವಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವು ಜನರ ಧ್ವನಿಯನ್ನು ಹತ್ತಿಕ್ಕುವ ಮತ್ತೊಂದು ಪ್ರಯತ್ನ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಖರ್ಗೆ, ನಾಗರಿಕರ ಫೋನ್‌ಗಳಲ್ಲಿ ಆ್ಯಪ್ ಲೋಡ್ ಮಾಡುವ ವಿಷಯದಲ್ಲಿ ಯಾವುದೇ ಸಮಾಲೋಚನೆ ಇಲ್ಲದೆ ಸರ್ಕಾರ ಏಕಪಕ್ಷೀಯ ಕ್ರಮ ಕೈಗೊಂಡಿದೆ, ಇದು ಸರ್ವಾಧಿಕಾರಿತನದ ನಿಲುವಿಗೆ ಉದಾಹರಣೆ ಎಂದು ಹೇಳಿದ್ದಾರೆ. “ಜನರು ತಮ್ಮ ಕುಟುಂಬದವರೊಂದಿಗೆ, ಸ್ನೇಹಿತರೊಂದಿಗೆ ಏನು ಮಾತನಾಡುತ್ತಾರೆಂದು ಸರ್ಕಾರ ಏಕೆ ತಿಳಿದುಕೊಳ್ಳ ಬೇಕು?” ಎಂದು ಪ್ರಶ್ನಿಸಿಸಿರುವ ಅವರು, ಇದು ಡಿಜಿಟಲ್ ಗೌಪ್ಯತೆಯ ಮೇಲೆ ನಡೆಯುತ್ತಿರುವ ದಾಳಿಯ ಇನ್ನೊಂದು ರೂಪ ಎಂದಿದ್ದಾರೆ.
ಈಗಾಗಲೇ ಆದಾಯ ತೆರಿಗೆ ಕಾನೂನುಗಳು ಡಿಜಿಟಲ್ ಜೀವನವನ್ನು ಕಣ್ಗಾವಲು ವ್ಯವಸ್ಥೆಯಾಗಿ ಮಾಡಿವೆ, ಆರ್‌ಟಿಐ ದುರ್ಬಲಗೊಂಡಿದೆ, ಪೆಗಾಸಸ್ ಮೂಲಕ ನೂರಕ್ಕೂ ಹೆಚ್ಚು ಭಾರತೀಯರ ಫೋನ್ ಹ್ಯಾಕ್ ಮಾಡಲಾಗಿದೆ ಎಂಬುದು ಸಾಬೀತಾಗಿದೆ ಎಂದು ಸ್ಮರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa