
ನವದೆಹಲಿ, 02 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನದ ಅಂಗವಾಗಿ ಶುದ್ಧ ಗಾಳಿ, ಸುರಕ್ಷಿತ ನೀರು ಮತ್ತು ಆರೋಗ್ಯಕರ ವಾತಾವರಣ ನಿರ್ಮಾಣದ ಕಡೆ ಸಮಾಜದ ಎಲ್ಲ ವರ್ಗಗಳೂ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಮಾಲಿನ್ಯ ನಿಯಂತ್ರಣ ಕೇವಲ ಸರ್ಕಾರಗಳ ಜವಾಬ್ದಾರಿಯಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕರ ಪಾಲಿನ ಕರ್ತವ್ಯವೂ ಹೌದು ಎಂದು ಹೇಳಿದ್ದು, “ತ್ಯಾಜ್ಯವನ್ನು ಕಡಿಮೆ ಮಾಡುವುದು, ಇಂಧನ ಉಳಿತಾಯ ಮಾಡುವುದು, ಮರಗಳನ್ನು ನೆಡುವುದು, ಮರುಬಳಕೆ ಹಾಗೂ ಸುಸ್ಥಿರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದು—ಇಂತಹ ಪ್ರತಿಯೊಂದು ಚಟುವಟಿಕೆಯೂ ಪರಿಸರ ರಕ್ಷಣೆಗೆ ಮಹತ್ತರವಾದ ಕೊಡುಗೆ ನೀಡುತ್ತದೆ” ಎಂದಿರುವ ಗಡ್ಕರಿ,
ಪ್ರಕೃತಿ ಮತ್ತು ಮಾನವ ಸಾಮರಸ್ಯದಿಂದ ಬದುಕುವ ಭವಿಷ್ಯವನ್ನು ನಿರ್ಮಿಸುವುದು ರಾಷ್ಟ್ರದ ಪ್ರಮುಖ ಗುರಿಯಾಗಬೇಕು, ನಾಳೆಯ ಸುರಕ್ಷಿತ ಪರಿಸರಕ್ಕಾಗಿ ಇಂದು ಜಾಗೃತಿಯಿಂದ ಕಾರ್ಯನಿರ್ವಹಿಸೋಣ ಎಂದು ಅವರು ಕರೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa