
ಚಿತ್ರದುರ್ಗ, 02 ಡಿಸೆಂಬರ್ (ಹಿ.ಸ.) :
ಆ್ಯಂಕರ್ : 5 ವರ್ಷಕ್ಕೂ ಮೇಲ್ಪಟ್ಟು ಲೆಕ್ಕಪತ್ರಗಳನ್ನು ಸಲ್ಲಿಸಿ ದಾಖಲಿಸದ ಸಂಘ ಸಂಸ್ಥೆಗಳು ದಂಡ ಪಾವತಿಸಿ ಲೆಕ್ಕಪತ್ರ ಸಲ್ಲಿಸಲು ಸರ್ಕಾರವು ಅವಕಾಶ ಕಲ್ಪಿಸಿದೆ.
ಕರ್ನಾಟಕ ಸಂಘಗಳ ನೊಂದಣಿ ಅಧಿನಿಯಮ 1960 ರನ್ವಯ ನೊಂದಣಿಯಾದ ಸಂಘ-ಸಂಸ್ಥೆಗಳು ಕಲಂ-13 ರನ್ವಯ ಪ್ರತಿ ವರ್ಷ ಜಿಲ್ಲಾ ನೊಂದಣಾಧಿಕಾರಿಗಳ ಕಚೇರಿಗೆ ಲೆಕ್ಕಪತ್ರಗಳನ್ನು ಸಲ್ಲಿಸಿ ದಾಖಲಿಸಿಕೊಳ್ಳಬೇಕು.
5 ವರ್ಷಕ್ಕೂ ಮೇಲ್ಪಟ್ಟು ಲೆಕ್ಕಪತ್ರಗಳನ್ನು ಸಲ್ಲಿಸಿ ದಾಖಲಿಸದೇ ಇರುವ ಸಂಘ-ಸಂಸ್ಥೆಗಳು ಲೆಕ್ಕಪತ್ರ ಹಾಗೂ ಇತರೆ ಸಂಬಂಧಿಸಿದ ದಾಖಲೆಗಳನ್ನು ಇದೇ ಡಿಸೆಂಬರ್ 31 ರೊಳಗಾಗಿ ಸಲ್ಲಿಸಿ ಪ್ರತಿ ವರ್ಷಕ್ಕೆ ರೂ.3000-00ದಂತೆ ದಂಡ ಪಾವತಿಸಿ ದಾಖಲಿಸಿಕೊಳ್ಳಬೇಕು ಎಂದು ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಜಿಲ್ಲಾ ಸಂಘಗಳ ನೊಂದಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa