
ನವದೆಹಲಿ, 02 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಆಪರೇಷನ್ ಸಿಂಧೂರ್ ವೇಳೆ ಭಾರತೀಯ ನೌಕಾಪಡೆಯ ಆಕ್ರಮಣಕಾರಿ ನಿಲುವಿನಿಂದ ಪಾಕಿಸ್ತಾನಿ ನೌಕಾಪಡೆ ಬಂದರಿನಿಂದ ಹೊರಬರಲು ಹೆದರಿತು ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ತಿಳಿಸಿದ್ದಾರೆ. ಕಾರ್ಯಾಚರಣೆಯಿಂದ ಪಾಕಿಸ್ತಾನಕ್ಕೆ ಹೋಗುವ ಹಡಗುಗಳ ವಿಮಾ ವೆಚ್ಚ ಹೆಚ್ಚಳ ಸೇರಿದಂತೆ ಆರ್ಥಿಕ ಒತ್ತಡ ಉಂಟಾಗಿದೆ ಎಂದು ಹೇಳಿದ್ದಾರೆ.
ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ನೌಕಾಪಡೆಯು 11,000 ಹಡಗು ದಿನಗಳು, 50,000 ಹಾರಾಟ ಗಂಟೆಗಳು ಪೂರ್ಣಗೊಳಿಸಿದ್ದು, 1 ಜಲಾಂತರ್ಗಾಮಿ ಹಾಗೂ 12 ಯುದ್ಧನೌಕೆಗಳನ್ನು ಸೇರಿಸಿಕೊಂಡಿದೆ. ಕಡಲ್ಗಳ್ಳತನ ವಿರೋಧಿ ಅಭಿಯಾನದಲ್ಲಿ 62 ಕಡಲ್ಗಳ್ಳರ ಬಂಧನ, 2008ರಿಂದ ಅಡೆನ್ ಕೊಲ್ಲಿಯಲ್ಲಿ 7,800 ವ್ಯಾಪಾರಿ ಹಡಗುಗಳಿಗೆ ಬೆಂಗಾವಲು ನೀಡಲಾಗಿದೆ ಎಂದು ತಿಳಿಸಿದರು.
ಮಾನವೀಯ ಕಾರ್ಯಾಚರಣೆಗಳ ಅಡಿಯಲ್ಲಿ ನೌಕಾಪಡೆ ಮ್ಯಾನ್ಮಾರ್ ಹಾಗೂ ಶ್ರೀಲಂಕಾಗೆ ತುರ್ತು ನೆರವು ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa