ಬಳ್ಳಾರಿ ಜಿಲ್ಲಾ ಸವಿತಾ ಸಮಾಜದ ನೂತನ ಜಿಲ್ಲಾಧ್ಯಕ್ಷರಾಗಿ ಎಂ. ನಾರಾಯಣಸ್ವಾಮಿ
ಬಳ್ಳಾರಿ, 02 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ಜಿಲ್ಲಾ ಸವಿತಾ ಸಮಾಜದ ನೂತನ ಜಿಲ್ಲಾಧ್ಯಕ್ಷರಾಗಿ ಎಂ. ನಾರಾಯಣಸ್ವಾಮಿ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ. ಬಳ್ಳಾರಿಯ ಕೌಲ್‍ಬಜಾರ್ ನಲ್ಲಿ ಇರುವ ಸವಿತಾ ಸಮಾಜದ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕರ್
ಬಳ್ಳಾರಿ ಜಿಲ್ಲಾ ಸವಿತಾ ಸಮಾಜದ ನೂತನ ಜಿಲ್ಲಾಧ್ಯಕ್ಷರಾಗಿ ಎಂ. ನಾರಾಯಣಸ್ವಾಮಿ


ಬಳ್ಳಾರಿ ಜಿಲ್ಲಾ ಸವಿತಾ ಸಮಾಜದ ನೂತನ ಜಿಲ್ಲಾಧ್ಯಕ್ಷರಾಗಿ ಎಂ. ನಾರಾಯಣಸ್ವಾಮಿ


ಬಳ್ಳಾರಿ ಜಿಲ್ಲಾ ಸವಿತಾ ಸಮಾಜದ ನೂತನ ಜಿಲ್ಲಾಧ್ಯಕ್ಷರಾಗಿ ಎಂ. ನಾರಾಯಣಸ್ವಾಮಿ


ಬಳ್ಳಾರಿ, 02 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಜಿಲ್ಲಾ ಸವಿತಾ ಸಮಾಜದ ನೂತನ ಜಿಲ್ಲಾಧ್ಯಕ್ಷರಾಗಿ ಎಂ. ನಾರಾಯಣಸ್ವಾಮಿ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.

ಬಳ್ಳಾರಿಯ ಕೌಲ್‍ಬಜಾರ್ ನಲ್ಲಿ ಇರುವ ಸವಿತಾ ಸಮಾಜದ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸವಿತಾ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರಾದ ಹೆಚ್. ತಿಪ್ಪಣ್ಣ ಅವರು ನೂತನ ಜಿಲ್ಲಾಧ್ಯಕ್ಷರಿಗೆ ಅಧಿಕಾರ ಪ್ರಮಾಣ ಪತ್ರವನ್ನು ವಿತರಣೆ ಮಾಡಿದರು.

ನೂತನ ಜಿಲ್ಲಾಧ್ಯಕ್ಷರಾದ ಎಂ. ನಾರಾಯಣಸ್ವಾಮಿ ಅವರು, ಸವಿತಾ ಸಮಾಜದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುವೆ. ಜಿಲ್ಲೆ, ಹೋಬಳಿ, ತಾಲೂಕು ಮಟ್ಟದಲ್ಲಿ ಸಮಾಜವನ್ನು ಸಂಘಟಿಸಿ, ಬಲಪಡಿಸುವೆ ಎಂದರು.

ತಾಲ್ಲೂಕು ಅಧ್ಯಕ್ಷ ಆರ್.ಶೇಖಣ್ಣ, ನಗರ ಅಧ್ಯಕ್ಷ ಉಮೇಶ್, ಜಿಲ್ಲಾ ಮುಖಂಡರಾದ ಬಿ. ಜಾನಕಿರಾಂ, ಎಲ್. ರಾಮು, ಬಾಲಕೃಷ್ಣ, ವಿ. ವೆಂಕಟೇಶ್, ಎಂ. ದೇವಣ್ಣ, ಹೆಚ್. ನಾಗೇಶ್, ವೈ. ತಿಪ್ಪೇಸ್ವಾಮಿ, ವೈ. ಶಿವಕುಮಾರ್, ಎಂ. ಭಾಸ್ಕರ್, ಎಂ. ಅಶೋಕ್‍ಕುಮಾರ್, ರಾಮಕೃಷ್ಣ, ಎಂ. ಅಯ್ಯಪ್ಪ, ಹೆಚ್. ಹನುಮಂತರಾಯುಡು, ಎನ್. ಮಹಾಂತೇಶ್, ರಾಮಣ್ಣ, ಭೀಮ ತಾಳೂರು, ವೀರೇಂದ್ರ ಸಿರುಗುಪ್ಪ, ಸಣ್ಣ ತಿಮ್ಮಪ್ಪ, ಪಾಂಡುರಂಗಪ್ಪ, ಸಣ್ಣ ತಿಪ್ಪೇಸ್ವಾಮಿ, ಕೃಷ್ಣಮೂರ್ತಿ ಸೇರಿದಂತೆ ಹಲವಾರು ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande